»   » ಈ ಸಲದ ರಾಜ್ಯ ಪ್ರಶಸ್ತಿಗೆ ನಾಗತಿಹಳ್ಳಿ ಮರ್ಜಿ ಬೇಕು!?

ಈ ಸಲದ ರಾಜ್ಯ ಪ್ರಶಸ್ತಿಗೆ ನಾಗತಿಹಳ್ಳಿ ಮರ್ಜಿ ಬೇಕು!?

Subscribe to Filmibeat Kannada


ರಾಜ್ಯ ಸರ್ಕಾರದ ಸಿನಿಮಾ ಪ್ರಶಸ್ತಿಗಳು ಹೊರಬಿದ್ದಾಗ, ಏನೇನೋ ರಗಳೆಗಳು. ಆಯೋಗ್ಯರಿಗೆ ಪ್ರಶಸ್ತಿ ಬಂದಿವೆ, ಯೋಗ್ಯರು ಪ್ರಶಸ್ತಿ ವಂಚಿತರಾಗಿದ್ದಾರೆ ಎಂಬ ದೂರುಗಳು ಇದ್ದದ್ದೇ.

2006-07ನೇ ಸಾಲಿನ ರಾಜ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷರು. ಈ ಕುರಿತ ಆದೇಶ ಹೊರಬಿದ್ದಿದ್ದು, ನಾಗತಿ ಮರ್ಜಿಗಾಗಿ ಅನೇಕರು ಈಗಾಗಲೇ ಬಾಗಿಲಲ್ಲಿ ನಿಂತಿದ್ದಾರೆ. ಅವರು ಪ್ರಶಸ್ತಿಗೆ ಯಾವ ಸ್ಕೇಲ್ ಬಳಸುತ್ತಾರೋ, ಈಗಲೇ ಹೇಳಲಾಗದು.

ನಟ ರಾಮಕೃಷ್ಣ, ಪತ್ರಕರ್ತ ಎ.ಎಂ.ಇಸ್ಮಾಯಿಲ್, ಛಾಯಾಗ್ರಾಹಕ ಬಿ.ಎಸ್.ಬಸವರಾಜ್, ನಾ.ದಾಮೋದರ ಶೆಟ್ಟಿ, ಗಾಯಕಿ ಬಿ.ಕೆ.ಸುಮಿತ್ರಾ, ಕಲಾ ನಿರ್ದೇಶಕ ಶಶಿಧರ್ ಅಡಪ, ನಿರ್ಮಾಪಕ ಕೆ.ಜಿ.ಎನ್.ಕುಮಾರ್ ಆಯ್ಕೆ ಮಂಡಳಿ ಸದಸ್ಯರು.

ಆಯ್ಕೆ ಸಮಿತಿ ಮುಂದೆ ಅಂತಿಮವಾಗಿ 36ಸಿನಿಮಾಗಳು, ಪ್ರಶಸ್ತಿ ಭಾಗ್ಯಕ್ಕಾಗಿ ಕಾದು ಕುಳಿತಿವೆ. ಅವುಗಳೆಂದರೆ,

 1. ಅರಸು
 2. ಜನಪದ
 3. ಶ್ರೀ ದಾನಮ್ಮದೇವಿ
 4. ಮಸಣದ ಮಕ್ಕಳು
 5. ಗಂಡುಗಲಿ ಕುಮಾರರಾಮ
 6. ಕಾಡ ಬೆಳದಿಂಗಳು
 7. ದೇಸಿ
 8. ಸೈನೈಡ್
 9. ತಾಯಿಯ ಮಡಿಲು
 10. ಮುಂಗಾರು ಮಳೆ
 11. ತವರಿನ ಸಿರಿ
 12. ತೆನಾಲಿ ರಾಮ
 13. ಕನ್ನಡದ ಕಂದ
 14. ತಂಗಿಯ ಮನೆ
 15. ದುನಿಯಾ
 16. ಕಲ್ಲರಳಿ ಹೂವಾಗಿ
 17. ಕುಸುಮ
 18. ಸೇವಂತಿ ಸೇವಂತಿ
 19. ತನನಂ ತನನಂ
 20. ದತ್ತ
 21. ನಗೆ ಹಬ್ಬ
 22. ಜೀವನಧಾರೆ
 23. ಈ ಪ್ರೀತಿ ಒಂಥರಾ
 24. ಸ್ನೇಹಾಂಜಲಿ
 25. ಒಂದು ಪ್ರೀತಿಯ ಕತೆ
 26. ವಿದ್ಯಾರ್ಥಿ
 27. ಶ್ರೀ ಕೈವಾರ ತಾತಯ್ಯ
 28. ಸೌಂದರ್ಯ
 29. ಜೊತೆ ಜೊತೆಯಲಿ
... ಇತ್ಯಾದಿ, ಇತ್ಯಾದಿ.

ಓದುಗರೇ, ನಿಮ್ಮ ದೃಷ್ಟಿಯಲ್ಲಿ ಅತ್ಯುತ್ತಮ ನಟ/ನಟಿ/ನಿರ್ದೇಶಕ / ಸಂಗೀತ ನಿರ್ದೇಶಕ / ಅತ್ಯುತ್ತಮ ಚಿತ್ರ ಯಾವುದೆಂದು ಬರೆದು ತಿಳಿಸಿ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada