»   » ವಿಜಯ ರಾಘವೇಂದ್ರ- ರಾಧಿಕಾರ ಚಾಕೊಲೇಟ್‌ ಪ್ರೇಮ

ವಿಜಯ ರಾಘವೇಂದ್ರ- ರಾಧಿಕಾರ ಚಾಕೊಲೇಟ್‌ ಪ್ರೇಮ

Posted By: Staff
Subscribe to Filmibeat Kannada

ಈ ಹೊಸ ಸ್ಯಾಂಡಲ್‌ವುಡ್‌ ಜೋಡಿಗೆ 'ಚಾಕೊಟೇಲ್‌ ಜೋಡಿ" ಅಂತಲೇ ಹೆಸರು ಸಿಕ್ಕಿದೆ. ಆ ಪಾಟಿ ಚಾಕೊಲೇಟ್‌ ತಿಂತಾರಂತೆ ವಿಜಯ ರಾಘವೇಂದ್ರ ಹಾಗೂ ರಾಧಿಕ ವಿಜಯ ರಾಘವೇಂದ್ರ- ರಾಧಿಕಾ ಈಡುಜೋಡಿ ಸಿನಿಮಾಗಳಲ್ಲಿ ಸರಾಗ ಸಾಗುತ್ತಿರುವುದಾದರೂ ಹೇಗೆ? ಬರುತ್ತಲೇ ಮದುವೆ ವಿವಾದದ ಅಲೆಯ ಜೊತೆಗೇ ಸದ್ದು ಮಾಡಿದ ರಾಧಿಕಾಗೂ ವಿಜಯ ರಾಘವೇಂದ್ರನಿಗೂ ಈ ಪಾಟಿ ಹೊಂದಾಣಿಕೆ ಹೇಗೆ ಬೆಳೆಯಿತು? ಉತ್ತರ- ಚಾಕೊಲೇಟ್ಸ್‌.

ಹೌದು, ರಾಘವೇಂದ್ರ ಹಾಗೂ ರಾಧಿಕಾಗೆ ಚಾಕೊಲೇಟ್ಸ್‌ ಅಂದರೆ ಆರನೇ ಪ್ರಾಣ. ಇಬ್ಬರೂ ದಿನಾ ಶೂಟಿಂಗ್‌ ಆದ ಮೇಲೆ ಮಾಡುವ ದೊಡ್ಡ ಕೆಲಸವೆಂದರೆ ಚಾಕೊಲೇಟ್‌ಗಳ ಮೆಲ್ಲುವುದು. ಅಷ್ಟೇ ಅಲ್ಲ ರಾಧಿಕಾಗೆ ಯಾವ ಬಣ್ಣ ಇಷ್ಟವೋ ರಾಘವೇಂದ್ರನಿಗೂ ಅದೇ ಬಣ್ಣ ಮೆಚ್ಚು. ರಾಘವೇಂದ್ರ ಕೊಳ್ಳುವ ವಿನ್ಯಾಸದ ಬಟ್ಟೆ ರಾಧಿಕಾಗೂ ಇಷ್ಟ. ಕೆಣಕಿದರೆ ರಾಧಿಕಾ ಹೇಳುತ್ತಾರೆ- 'ಇಬ್ಬರ ಟೇಸ್ಟೂ ಒಂದೇ ಥರ ಇದೆ. ಇಂಥಾ ನಟ ನನಗೆ ಸಿಕ್ಕಿರೋದಕ್ಕೆ ನಾನಂತೂ ಲಕ್ಕಿ. ಬೆಟ್ಟಿಂಗ್‌ನಲ್ಲಿ ಸಾಕಷ್ಟು ಬಾರಿ ರಾಘವೇಂದ್ರನನ್ನು ಸೋಲಿಸಿದ್ದೇನೆ. ನಾನು ಗೆದ್ದಾಗಲೆಲ್ಲಾ, ರಾಘವೇಂದ್ರ ಚಾಕೊಲೇಟ್‌ ಕೊಡಿಸಬೇಕು. ನಮ್ಮ ಬೆಟ್ಟಿಂಗ್‌ ಇಂಥದ್ದೇ ಅಂತೇನೂ ಇಲ್ಲ. ಶೂಟಿಂಗ್‌ ಇಷ್ಟು ಶಾಟ್‌ಗಳಲ್ಲಿ ಮುಗಿಯುತ್ತೆ ಅನ್ನುವುದರಿಂದ ಹಿಡಿದು, ಇಷ್ಟು ಹೊತ್ತಿಗೇ ಪ್ಯಾಕಪ್‌ ಆಗುತ್ತದೆ ಅನ್ನುವವರೆಗೆ ನಮ್ಮ ನಡುವೆ ಗೆಸ್‌ ವರ್ಕ್‌ ನಡೆಯುತ್ತದೆ. ಗೆಸ್‌ನಲ್ಲಿ ಗೆದ್ದೋರಿಗೆ ಸೋತೋರು ಚಾಕೊಲೇಟ್‌ ಕೊಡಿಸ್ತೀವಿ".

ಕುದುರೆ ರೇಸು, ಇಸ್ಪೀಟು ಅಂತ ಬೆಟ್ಟಿಂಗು ಕಟ್ಟುತ್ತಿದ್ದ ಸಿನಿಮಾ ನಾಯಕ/ನಾಯಕಿಯರ ದೊಡ್ಡ ಪಟ್ಟಿಯೇ ಸಿಗಬಹುದು. ಆದರೆ ಈ ಚಾಕೊಲೇಟ್‌ ನಾಯಕ- ನಾಯಕಿ ಖಂಡಿತ ಅಪರೂಪ. ಇವರಿಗೆ ಅಪ್ಪ- ಅಮ್ಮಂದಿರು ಕಡಿವಾಣ ಹಾಕಲೇಬೇಕು. ಇಲ್ಲವಾದರೆ ಹಲ್ಲು ಹುಳುಕಾಗುತ್ತೆ !

English summary
New Kannada film pair Vijaya Raghavendra and Radhika always bet for chocolates
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada