»   » ಎದೆನೋವಿನಿಂದ ಅಣ್ಣಾವ್ರು ಆಸ್ಪತ್ರೆಗೆ

ಎದೆನೋವಿನಿಂದ ಅಣ್ಣಾವ್ರು ಆಸ್ಪತ್ರೆಗೆ

Posted By: Staff
Subscribe to Filmibeat Kannada

ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು , ಎದೆನೋವಿನ ಕಾರಣ ವೊಕ್ಹಾರ್ಟ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎದೆನೋವು ಅನುಭವಿಸಿದ ರಾಜ್‌ರನ್ನು ಭಾನುವಾರ (ಜು.18) ವೊಕ್ಹಾರ್ಟ್‌ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಗೆ ದಾಖಲಿಸಲಾಗಿದೆ. ರಾಜ್‌ ಅವರ ಹೃದಯ ತಪಾಸಣೆ ನಡೆಸಲಾಗಿದ್ದು , ಅವರ ಪರಿಸ್ಥಿತಿ ಉತ್ತಮವಾಗಿದೆ. ಆತಂಕಕ್ಕೆ ಕಾರಣವಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷ ವಿಶಾಲ್‌ ಬಾಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಇನ್ನೂ ಎರಡು ಮೂರು ದಿನಗಳ ಕಾಲ ರಾಜ್‌ ಅವರ ದೇಹಸ್ಥಿತಿ ಗಮನಿಸಲಾಗುವುದು. ಹೃದಯತಜ್ಞ ಡಾ.ರಂಗನಾಥ ನಾಯಕ್‌ ಹಾಗೂ ರಾಜ್‌ರ ಖಾಸಗಿ ವೈದ್ಯ ಡಾ.ರಮಣ ರಾವ್‌ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದಾರೆ.

ವರನಟ ರಾಜ್‌ಕುಮಾರ್‌ ಇತ್ತೀಚೆಗಷ್ಟೇ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಾಸ್‌ಮಟ್‌ ಕೀಲು ಮತ್ತು ಮೂಳೆ ಆಸ್ಪತ್ರೆಗೆ ಜರುಗಿದ್ದ ಶಸ್ತ್ರಚಿಕಿತ್ಸೆಯಲ್ಲಿ ಮಂಡಿಯಲ್ಲಿ ಅಳವಡಿಸಲಾಗಿದ್ದ ಕೆಲವು ತಂತಿಗಳನ್ನು ಸಡಿಲಗೊಂಡ ಕಾರಣ ತೆಗೆದುಹಾಕಲಾಗಿತ್ತು .

(ಪಿಟಿಐ)

English summary
Kannada film icon Dr. Rajkumar hospitalised after chest pain
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada