»   » ಎಲ್‌.ಆರ್‌.ಈಶ್ವರಿಗೆ ‘ಸಾಧನ’ ಸನ್ಮಾನ

ಎಲ್‌.ಆರ್‌.ಈಶ್ವರಿಗೆ ‘ಸಾಧನ’ ಸನ್ಮಾನ

Subscribe to Filmibeat Kannada

ಬೆಂಗಳೂರು : ಪ್ರಖ್ಯಾತ ಗಾಯಕಿ ಮಂಜುಳಾ ಗುರುರಾಜ್‌ ನೇತೃತ್ವದ ಸಾಧನ ಸಂಗೀತ ಶಾಲೆ ಈಗ ಹದಿನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಕಂಚಿನ ಕಂಠದ ಜನಪ್ರಿಯ ಗಾಯಕಿ ಎಲ್‌.ಆರ್‌.ಈಶ್ವರಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಜೆ.ಪಿ.ನಗರದ ಆರ್‌.ವಿ. ದಂತವೈದ್ಯ ಕಾಲೇಜಿನ ಸಭಾಂಗಣದಲ್ಲಿ ಜುಲೈ 23 ಮತ್ತು 24ರಂದು ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಮಂಜುಳಾ ಗುರುರಾಜ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚಿತ್ರ ಸಾಹಿತಿ ಆರ್‌.ಎನ್‌.ಜಯಗೋಪಾಲ್‌, ಹಾರ್ಮೋನಿಯಂ ಕಲಾವಿದ ವಸಂತ್‌ ಕನಕಪುರಿ ಅವರನ್ನು ಸನ್ಮಾನಿಸಲು ನಿರ್ಧರಿಸಲಾಗಿದ್ದು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಗೀತ ಶಾಲೆ : ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿ ಹಂಸಲೇಖ ಅವರು ಸಂಗೀತ ಶಾಲೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಸ್ಪರ್ಧೆ ನೀಡುವಂತೆ ಅವರ ಶಿಷ್ಯೆ ನಂದಿತಾ ಮತ್ತು ಶಾಸ್ತ್ರಿ ಸಂಗೀತ ಶಾಲೆಗಳನ್ನು ತೆರೆದಿದ್ದಾರೆ. ಭವಿಷ್ಯದಲ್ಲಿ ಈ ಎಲ್ಲದರ ಮಧ್ಯೆ ಸಾಧನ ಸಂಗೀತ ಶಾಲೆ ಮುನ್ನುಗ್ಗುವುದೇ ಎಂಬುದನ್ನು ಕಾದು ನೋಡಬೇಕು.

Post your views

ಇದನ್ನೂ ಓದಿ :
ಗುಂಡುಗಾಯಕಿ ಮಂಜುಳಾ ಹಾಡುಹಾದಿ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada