»   » ಡಾ.ರಾಜ್‌ ಆರೋಗ್ಯಕ್ಕೆ ಗೋಯಲ್‌ ಸರ್ಟಿಫಿಕೇಟ್‌

ಡಾ.ರಾಜ್‌ ಆರೋಗ್ಯಕ್ಕೆ ಗೋಯಲ್‌ ಸರ್ಟಿಫಿಕೇಟ್‌

Subscribe to Filmibeat Kannada

ಮುಂಬಯಿ : ನಗರದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಜ್‌ಕುಮಾರ್‌ ತಮ್ಮ ಆರೋಗ್ಯ ತಪಾಸಣೆಯನ್ನು ಮುಗಿಸಿಕೊಂಡು, ಗುರುವಾರ ರಾತ್ರಿ ಬೆಂಗಳೂರಿಗೆ ಮರಳಿದ್ದಾರೆ.

ತಮ್ಮ ಪತ್ನಿ ಪಾರ್ವತಮ್ಮ, ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಕುಟುಂಬದ ವೈದ್ಯ ಡಾ.ರಮಣ ಅವರೊಂದಿಗೆ ಬುಧವಾರ ಮುಂಬಯಿಗೆ ಆಗಮಿಸಿದ್ದ ಅವರು, ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ರಾಜ್‌ಕುಮಾರ್‌ ಅವರನ್ನು ತಪಾಸಣೆ ಮಾಡಿದ ಆಸ್ಪತ್ರೆಯ ತಜ್ಞ ವೈದ್ಯ ಡಾ.ಬಿ.ಕೆ.ಗೋಯಲ್‌ ಪ್ರಕಾರ, ರಾಜ್‌ ಕುಮಾರ್‌ ಆರೋಗ್ಯ ಸ್ಥಿರವಾಗಿದೆ.

ಸುಮಾರು 76ವರ್ಷದ ನಟ ಡಾ.ರಾಜ್‌ಕುಮಾರ್‌ ಅವರ ಆರೋಗ್ಯದಲ್ಲಿ ಯಾವುದೇ ದೋಷಗಳಿಲ್ಲ. ಆಸ್ಪತ್ರೆಗೆ ದಾಖಲಾದ ಒಂದೇ ದಿನದಲ್ಲಿ ವಿವಿಧ ಪರೀಕ್ಷೆಗಳನ್ನು ಕೈಗೊಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಗೋಯಲ್‌ ತಿಳಿಸಿದ್ದಾರೆ.


(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada