»   » ಕ್ರೇಜಿಸ್ಟಾರ್ ಜೊತೆ ಕುಣಿಯಳು ಬರುತ್ತಿದ್ದಾಳೆ ಚಾರುಲತೆ!

ಕ್ರೇಜಿಸ್ಟಾರ್ ಜೊತೆ ಕುಣಿಯಳು ಬರುತ್ತಿದ್ದಾಳೆ ಚಾರುಲತೆ!

Subscribe to Filmibeat Kannada


ನಿಮಗೆ ನೆನಪಿರಬಹುದು. ರಮೇಶ್ ಅರವಿಂದ್ ಪ್ರಧಾನ ಪಾತ್ರವುಳ್ಳ ಮದುವೆ, ಓ ಮಲ್ಲಿಗೆ ಮತ್ತಿತರ ಸಾಂಸಾರಿಕ ಚಿತ್ರಗಳಲ್ಲಿ ಉತ್ತಮವಾಗಿ ಅಭಿನಯಿಸಿ, ಚಾರುಲತಾ ಭರವಸೆ ಮೂಡಿಸಿದ್ದರು.  • ಸುಮನಸಾ
ಆಗ ಅವಕಾಶಗಳು ಅವರನ್ನು ಅರಸಿದ್ದವು. ಆದರೂ ಈವರೆಗೆ ಚಾರುಲತಾ ಅಜ್ಞಾತವಾಸದಲ್ಲಿದ್ದರು! ಈಗ ಅವರ ಅಜ್ಞಾತವಾಸ ಮುಗಿದಿದ್ದು, ಬೆಳ್ಳಿತೆರೆ ಮೇಲೆ ಚಾರುಲತಾರನ್ನು ನೋಡಬಹುದು!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷೆ ಚಿತ್ರ ಮಂಜಿನ ಹನಿಯಲ್ಲಿ ಚಾರುಲತಾ ಕಾಣಿಸಿಕೊಳ್ಳಲಿದ್ದು, ಹಾಡೊಂದಕ್ಕೆ ನರ್ತಿಸಲಿದ್ದಾರೆ.

ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಸಕಲೇಶಪುರ ತಾಲೂಕಿನ ಕುಗ್ರಾಮವೊಂದರಲ್ಲಿ ನಡೆಯುತ್ತಿದೆ. ಪೂನಂ ಕೌರ್ ಚಿತ್ರದ ನಾಯಕಿ. ಅಭಿನಯದ ಜೊತೆಗೆ ಸಂಗೀತದ ಹೊಣೆಯನ್ನು ತಮ್ಮ ಹೆಗಲಿಗೆ ರವಿಚಂದ್ರನ್ ಹಾಕಿಕೊಂಡಿದ್ದಾರೆ.

ಮೊದಲು ಸಾಂಸಾರಿಕ ಚಿತ್ರಗಳಲ್ಲಿ ಹಳ್ಳಿ ಗೌರಮ್ಮನಂತೆ, ನಂತರ ಗ್ಲಾಮರ್ ಪಾತ್ರಗಳಲ್ಲಿ ಚಾರುಲತಾ ಕಾಣಿಸಿಕೊಂಡಿದ್ದರು. ಜಗ್ಗೇಶ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಸೇರಿದಂತೆ ಖ್ಯಾತ ನಾಯಕ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡವರು ಅವರು.

ಇದನ್ನೂ ಓದಿ :

ಚಾರು ಈಗ ಸೆಕ್ಸ್‌ ಸಿನಿಮಾ ನಾಯಕಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada