»   » ಇಂದಿನಿಂದ ‘ಜೋಗಿ’ ಜಾತ್ರೆ

ಇಂದಿನಿಂದ ‘ಜೋಗಿ’ ಜಾತ್ರೆ

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಬಹು ನಿರೀಕ್ಷೆಯ ‘ಜೋಗಿ’ ಚಿತ್ರ ರಾಜ್ಯದಲ್ಲಿ ಮಾತ್ರವಲ್ಲ, ಅಮೆರಿಕಾದಲ್ಲೂ ಶುಕ್ರವಾರ ತೆರೆಕಂಡಿದೆ. ‘ಜೋಗಿ’ ಜ್ವರದಿಂದ ಬಳಲುತ್ತಿದ್ದವರು ಚಿತ್ರ ನೋಡಲು ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದಾರೆ. ಎಲ್ಲೆಲ್ಲೂ ಜೋಗಿ ಭಜನೆ...ಜೋಗಿ ಜಪ...

ಅಶ್ವಿನಿ ಪ್ರೊಡಕ್ಷನ್ಸ್‌ ನಿರ್ಮಾಣದ ಚೊಚ್ಚಲ ಕಾಣಿಕೆಯಾಗಿರುವ ಈ ಚಿತ್ರ, ಆರಂಭದಿಂದ ಹಿಡಿದು ಈವರೆಗೆ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದೆ. ‘ಎಕ್ಸ್‌ಕ್ಯೂಸ್‌ ಮಿ’ ಮತ್ತು ‘ಕರಿಯಾ ’ ಚಿತ್ರಗಳಿಂದ ತನ್ನದೇ ಆದ ಕ್ರೇಜ್‌ ಹೊಂದಿರುವ ಪ್ರೇಮ್‌ ನಿರ್ದೇಶನದ ಮೂರನೇ ಚಿತ್ರ‘ಜೋಗಿ’.

ಚಿತ್ರದ 68ಪ್ರಿಂಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, 75ಕೇಂದ್ರಗಳಲ್ಲಿ ತೆರೆಕಂಡಿದೆ. ಆ ಮೂಲಕ ಸ್ಯಾಂಡಲ್‌ವುಡ್‌ನ ಹಳೆಯ ರೆಕಾರ್ಡ್‌ಗಳನ್ನು ಉಡಾಯಿಸಿದೆ. ನಿರ್ಮಾಪಕ ರಾಮಪ್ರಸಾದ್‌ ಖುಷಿಯಲ್ಲಿದ್ದಾರೆ. ಕಾಳಸಂತೆಯಲ್ಲಿ 500ರಿಂದ 1300ರೂ.ವರೆಗೆ ಚಿತ್ರದ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಒಂದು ವಾರದ ಟಿಕೆಟ್‌ಗಳನ್ನು ಆ.17ರಿಂದಲೇ ಮುಂಗಡವಾಗಿ ವಿತರಿಸಲಾಗಿದೆ.

ಕನ್ನಡ ಚಿತ್ರಗಳನ್ನು ಪ್ರದರ್ಶಿಸದ ರಾಜ್ಯದ ಗಡಿಭಾಗದ ಚಿತ್ರಮಂದಿರಗಳಿಗೂ ‘ಜೋಗಿ’ ಪ್ರವೇಶಿಸಿದ್ದಾನೆ. ರಾಜ್ಯದಲ್ಲಿ ಬಿಡುಗಡೆಯಾದ ದಿನವೇ, ಅಮೇರಿಕಾದ ಉತ್ತರ ಕ್ಯಾಲಿಫೋರ್ನಿಯಾಕ್ಕೆ ‘ಜೋಗಿ’ ತೆರಳುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದ್ದಾನೆ.

ಏನಿದು ‘ಜೋಗಿ’ ? : ಇತ್ತೀಚೆಗೆ ಸೋಲುಗಳ ಸರಮಾಲೆಯನ್ನು ಕಂಡಿರುವ ನಟ ಶಿವರಾಜ್‌ ಕುಮಾರ್‌ಗೆ ‘ಜೋಗಿ’ ಬ್ರೇಕ್‌ ನೀಡುವುದೆಂಬ ನಿರೀಕ್ಷೆ ಗಾಂಧಿನಗರದಲ್ಲಿದೆ. ಯಾನಾ ಗುಪ್ತಾಳ ಐಟಂ ಸಾಂಗ್‌, ರೌಡಿಸಂ, ಪ್ರೀತಿ-ವಾತ್ಸಲ್ಯದ ತೀವ್ರತೆ, ಅಮ್ಮನ ಸೆಂಟಿಮೆಂಟ್‌ ಸೇರಿದಂತೆ ಅದೇ ಹಳೆಯ ಮಸಾಲೆ ಸರಕು ಚಿತ್ರದಲ್ಲಿದ್ದರೂ, ಪ್ರೇಮ್‌ರ ಟಚ್‌ ಚಿತ್ರಕ್ಕೆ ಮೆರಗು ನೀಡಿದೆ.

ಜೆನಿಫರ್‌, ಅರುಂಧತಿ ನಾಗ್‌ ಮತ್ತಿತರರು ತಾರಾಗಣದಲ್ಲಿದ್ದಾರೆ. ಈಗಾಗಲೇ ಗುರುಕಿರಣ್‌ ಹಾಡುಗಳು ಎಲ್ಲರ ನಾಲಿಗೆಯಲ್ಲಿವೆ. ಬೆಟ್ಟದಷ್ಟು ನಿರೀಕ್ಷೆಗಳು ಮತ್ತು ಅಬ್ಬರದ ಪ್ರಚಾರದೊಂದಿಗೆ ಚಿತ್ರ ತೆರೆಕಂಡಿದೆ. ಅಂತಿಮವಾಗಿ ಚಿತ್ರದ ಹಣೆಬರಹ ಬರೆಯುವುದು ಪ್ರೇಕ್ಷಕ ದೊರೆಯೇ ತಾನೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada