»   » ಕನ್ನಡ ಸಿನಿಮಾಕ್ಕೆ ಎ.ಆರ್‌.ರೆಹಮಾನ್‌ ಸಂಗೀತ!

ಕನ್ನಡ ಸಿನಿಮಾಕ್ಕೆ ಎ.ಆರ್‌.ರೆಹಮಾನ್‌ ಸಂಗೀತ!

Subscribe to Filmibeat Kannada

ಕಳೆದ ವರ್ಷ ಕಮಲಹಾಸನ್‌ ಮತ್ತು ಅಮಿತಾಭ್‌ ಬಚ್ಚನ್‌ ಸ್ಯಾಂಡಲ್‌ವುಡ್‌ ಪ್ರವೇಶಿಸಿ, ಅಚ್ಚರಿ ಹುಟ್ಟಿಸಿದ್ದರು. ಚಿತ್ರೋದ್ಯಮದಲ್ಲಿ ಲವಲವಿಕೆ ವಾತಾವರಣಕ್ಕೆ ಕಾರಣರಾಗಿದ್ದರು. ಈ ವರ್ಷ ಎ.ಆರ್‌.ರೆಹಮಾನ್‌ ಪ್ರವೇಶ ನಿಜಕ್ಕೂ ಸಂತಸದ ಸಮಾಚಾರ.

ನಂಜುಂಡೇ ಗೌಡ ನಿರ್ದೇಶನದ ಸಿನಿಮಾವೊಂದಕ್ಕೆ ರೆಹಮಾನ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚೆನ್ನೈನ ಸ್ಟುಡಿಯೋದಲ್ಲಿ ಪ್ರಕ್ರಿಯೆಗಳು ಮುಂದುವರೆದಿವೆ ಎಂದು ಮೂಲಗಳು ಹೇಳಿವೆ. ಲಂಡನ್‌ನಲ್ಲಿ ನೆಲೆಸಿರುವ ಡಾ.ಮನೋಹರ್‌ ಮತ್ತು ಅವರ ಪತ್ನಿ ಸುನಂದಾ ಮನೋಹರ್‌ ಈ ಚಿತ್ರದ ನಿರ್ಮಾಪಕರು.

ಚಿತ್ರೀಕರಣ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದು, ಚಾಕಲೇಟ್‌ ಬಾಯ್‌ ಧ್ಯಾನ್‌ ಚಿತ್ರದ ನಾಯಕ. ಬೆಂಗಳೂರು ಮಾಲದ ಶರ್ಮಿಳೆ ನಾಯಕಿ. ಸ್ಯಾಂಡಲ್‌ವುಡ್‌ನಲ್ಲಿ ರೆಹಮಾನ್‌ರ ಮ್ಯಾಜಿಕ್‌ ಕಾಣಲು, ಚಿತ್ರರಂಗ ಕಾದು ಕುಳಿತಿದೆ.

ನಾರಾಯಣ್‌ ಸಿನಿಮಾ ಮತ್ತು ರೆಹಮಾನ್‌?

‘ತಾಯಿಯ ಮಡಿಲು’ ಚಿತ್ರದ ಹಾಡುಗಳನ್ನು ಆಲಿಸಿದ ಎ.ಆರ್‌.ರೆಹಮಾನ್‌ ಥ್ರಿಲ್‌ ಆಗಿದ್ದಾರೆ. ಆಕಸ್ಮಿಕವಾಗಿ ಈ ಚಿತ್ರದ ಹಾಡುಗಳನ್ನು ಕೇಳಿದ ಅವರು, ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಎಸ್‌.ನಾರಾಯಣ್‌ ಹೇಳಿದ್ದಾರೆ.

ಎಸ್‌.ಎ.ರಾಜಕುಮಾರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರೆಹಮಾನ್‌ ಜೊತೆ ಕೆಲಸ ಮಾಡುವ ರೀಮೋ ಮತ್ತು ಕೌಶಿಕ್‌ ಚಟರ್ಜಿ ಎಂಬ ವಾದ್ಯ ಕಲಾವಿದರು, ‘ತಾಯಿಯ ಮಡಿಲು’ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನಟ ಶಿವರಾಜ್‌ಕುಮಾರ್‌, ರಕ್ಷಿತಾ ತಾರಾಗಣದಲ್ಲಿದ್ದಾರೆ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada