»   » ಸಾಂಘವಿಯನ್ನು ಪ್ರೇಮ ಪಾಶದಲ್ಲಿ ಸಿಲುಕಿಸಿದ್ದಾನೆ ಒಬ್ಬ ಗೃಹಸ್ಥ !

ಸಾಂಘವಿಯನ್ನು ಪ್ರೇಮ ಪಾಶದಲ್ಲಿ ಸಿಲುಕಿಸಿದ್ದಾನೆ ಒಬ್ಬ ಗೃಹಸ್ಥ !

Posted By: Super
Subscribe to Filmibeat Kannada

ಸಾಂಘವಿ ಈಗ ತೆಳ್ಳಗಾಗಿದ್ದು, ಸಾಕಷ್ಟು ಆಕರ್ಷಕವಾಗಿದ್ದಾರೆ ! ಹಾಗಂತ ಅವರ ಪಿ.ಎ. ಸಿಕ್ಕ ಸಿಕ್ಕ ನಿರ್ಮಾಪಕರ ಹತ್ತಿರ ಹೇಳಿಕೊಂಡು ಬರುತ್ತಿದ್ದರೂ, ಸಿಗುತ್ತಿರುವ ಅವಕಾಶಗಳು ಅಷ್ಟಕ್ಕಷ್ಟೇ.

'ರಾಯರ ಮಗ" ಚಿತ್ರದಲ್ಲಿ ಜಗ್ಗೇಶ್‌ ನಾಯಕಿಯಾಗುವ ಮೂಲಕ ತೆರೆಗೆ ಪಾದಾರ್ಪಣೆ ಮಾಡಿದ ಈ ಚೆಲುವೆ ಏಕಾಏಕಿ ತಮಿಳು ಚಿತ್ರರಂಗಕ್ಕೆ ಹಾರಿದಳು. ಉಪ್ಪಿ ಕೂಡ ಈಕೆಯ ಜೊತೆ ತಮಿಳು ಚಿತ್ರವೊಂದರಲ್ಲಿ ಮಳೆ ಹಾಡಿನಲ್ಲಿ ಕುಣಿದಿರುವುದೇ ಸಾಂಘವಿ ಅಲ್ಲಿ ಎಷ್ಟು ಫೇಮಸ್ಸಾಗಿದ್ದಳು ಅನ್ನೋದಕ್ಕೆ ಸಾಕ್ಷಿ. ಕನ್ನಡ ಚಿತ್ರಗಳಿಗೆ ಈಕೆಯನ್ನು ಕರೆ ತರುವುದೇ ತ್ರಾಸು ಎಂಬಷ್ಟು ನಖರಾ ಮಾಡುತ್ತಿದ್ದ ಈಕೆಯ ಠಿಕಾಣಿ ಸದ್ಯಕ್ಕೆ ಮೈಸೂರಲ್ಲೇ.

'ಬಾಬಾ" ಮತ್ತು 'ಪಂಚತಂತ್ರಮ್‌" ನಂತರ ಯಾವುದೇ ತಮಿಳು ಆಫರ್‌ಗಳಿಲ್ಲದ ಕಾರಣ ರಾಕ್‌ಲೈನ್‌ ನಾಯಕತ್ವದ 'ಧೀರ" ಚಿತ್ರಕ್ಕೆಂದು ಕರ್ನಾಟಕಕ್ಕೆ ಬಂದ ಈ ಕನ್ನಡತಿ ಮೈಸೂರಿನ ತವರು ಮನೆಯಲ್ಲಿ ಝಾಂಡಾ ಹೂಡಿದಳು. ಸಾಕಷ್ಟು ಯೋಗ, ಕಸರತ್ತು ಮಾಡಿ ತೆಳ್ಳಗಾದಳು. ಇನ್ನು ಸ್ಯಾಂಡಲ್‌ವುಡ್‌ನಲ್ಲಾದರೂ ನೆಲೆ ಕಂಡುಕೊಳ್ಳಬೇಕು ಅನ್ನುವಷ್ಟರಲ್ಲಿ ಸಿಮ್ರಾನ್‌ಳ ಭಗ್ನ ಪ್ರೇಮಿಯಾಬ್ಬ ವಕ್ಕರಿಸಿದ.

ಈತ ಯಾರು ಅನ್ನೋದು ಮಾತ್ರ ಸಸ್ಪೆನ್ಸ್‌. ಸದ್ಯಕ್ಕೆ ಮಾಡೋಕೆ ಯಾವುದೇ ಕೆಲಸ ಇಲ್ಲದ ಈತ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾನಂತೆ. ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇದೆಯಂತೆ. ಹೀಗಿದ್ದೂ ಸಾಂಘವಿ ಮುಂದೆ ಮಂಡಿಯೂರಿ 'ಅಯ ಲವ ಯೂ..." ಅಂತ ಪಾಪ ಪಾಂಡು ವರಸೆಯಲ್ಲಿ ಬಡಬಡಿಸುತ್ತಿದ್ದಾನೆ. ಸಾಂಘವಿ ಅಧಿಕೃತವಾಗಿ ಈತನಿಗೆ ಪ್ರೇಮ ಭಿಕ್ಷೆ ನೀಡದಿದ್ದರೂ, ಹೋಟೇಲಲ್ಲಿ ಸುತ್ತುವುದಂತೂ ಅವಿರತವಾಗಿ ನಡೆದಿದೆ. ಒಟ್ಟಿನಲ್ಲಿ ಸಾಂಘವಿ ಇಲ್ಲೇ ಸೆಟ್ಲಾಗೋದು ಗ್ಯಾರಂಟಿ ಎನ್ನುತ್ತಿವೆ ಮೈಸೂರಿನ ಗಲ್ಲಿಗಳು!

English summary
Simrans ex-lover now aims on Sanghavi !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada