»   » ವಿನಯ ಪ್ರಸಾದ್ ನಡೆಸಿಕೊಡುವ ಚರ್ಚೆಗೆ ನೀವೂ ಬನ್ನಿ!

ವಿನಯ ಪ್ರಸಾದ್ ನಡೆಸಿಕೊಡುವ ಚರ್ಚೆಗೆ ನೀವೂ ಬನ್ನಿ!

Posted By:
Subscribe to Filmibeat Kannada


ಬೆಂಗಳೂರು, 19 : ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಸತ್ಯಮೂರ್ತಿ ಅನಂದೂರು ನಿರ್ದೇಶನದ "ಅನುಪಮಾ" ಎಂಬ ಧಾರಾವಾಹಿ ಈಗಾಗಲೇ ಪ್ರಸಿದ್ದಿ ಪಡೆದಿದೆ. ಐಪಿಎಸ್‌ನಲ್ಲಿ ಚಿನ್ನದ ಪದಕ ಪಡೆದು ದಕ್ಷ ಪೊಲೀಸ್ ಅಧಿಕಾರಿಣಿಯಾದ ನಾಯಕಿಯ ಪಾತ್ರವೇ; ಅನುಪಮಾ. ಈ ಪಾತ್ರ ನಿರ್ವಹಿಸುತ್ತಿರುವ ನಟಿ ವಿನಯಾ ಪ್ರಸಾದ್ ಕೆಲವೇ ದಿನಗಳಲ್ಲಿ ವೀಕ್ಷಕರ ಮನ ಗೆದ್ದಿದ್ದಾರೆ.

ವಿನಯ್ ಪ್ರಸಾದ್ ನಿಜ ಜೀವನದಲ್ಲಿ ಐಪಿಎಸ್ ಆಗಿರುವ ಎಡಿಜಿಪಿ ಹೋಂ ಗಾರ್ಡ್‌ನ ಜೀಜಾ ಹರಿ ಸಿಂಘ್ ಅವರನ್ನು ಭೇಟಿಯಾಗಲಿದ್ದಾರೆ. ಈ ಮುಖಾಮುಖಿಯಲ್ಲಿ ಇವರಿಬ್ಬರು ರೀಲ್ ಮತ್ತು ರಿಯಲ್ ಬದುಕಿನ ಅಡೆತಡೆಗಳು, ರಾಜ್ಯದ ಮಹಿಳೆಯರ ಇಂದಿನ ಸ್ಥಿತಿಗತಿ ಮುಂತಾದ ಪ್ರಮುಖ ವಿಷಯಗಳ ಕುರಿತು ಚರ್ಚಿಸುವರು.

ಬನ್ನಿ ಈ ಅಪರೂಪದ ಚರ್ಚೆಗೆ ನೀವೂ ಪ್ರತ್ಯಕ್ಷದರ್ಶಿಗಳಾಗಿ..

ದಿನಾಂಕ : ನವೆಂಬರ್ 21, 2007
ಸಮಯ : ಸಾಯಂಕಾಲ 5
ಸ್ಥಳ : ಬೋರ್ಡ್ ರೂಮ್, ಶೆಲ್ಟಾನ್ ಗ್ರ್ಯಾಂಡ್ ಹೋಟೆಲ್,
(ಡೆಕ್ಕನ್ ಹೆರಾಲ್ಡ್ ಪತ್ರಿಕಾ ಕಚೇರಿ ಸಮೀಪ) ಎಂ.ಜಿ ರಸ್ತೆ, ಬೆಂಗಳೂರು.

(ದಟ್ಸ್ ಕನ್ನಡ ವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X