»   » ಮದನ್‌ ಕಣ್ಣು ಕಮಲ್‌ ಚಿತ್ರದ ಮ್ಯಾಗೆ

ಮದನ್‌ ಕಣ್ಣು ಕಮಲ್‌ ಚಿತ್ರದ ಮ್ಯಾಗೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಒಂದೂ ಸಿನಿಮಾ ಬರಕತ್ತಾಗದಿದ್ದರೂ ಸಾಕಷ್ಟು ಕಾರಣಗಳಿಂದ ಸದ್ದು- ವಿವಾದ- ಸುದ್ದಿ ಮಾಡುತ್ತಿರುವ ಮದನ್‌ ಮಲ್ಲು ಸದ್ಯಕ್ಕೆ ಮಗನ ಮೇಲಿನ ಮಮಕಾರವನ್ನು ಜಾಸ್ತಿಯಾಗಿಸಿಕೊಂಡಿದ್ದಾರೆ. ಮಗ ಮಯೂರ್‌ ನಟಿಸಿರುವ ‘ಮಣಿ’ ಚಿತ್ರದ ವಿನೈಲ್‌ ಹೋರ್ಡಿಂಗ್‌ಗಳು ಇನ್ನೂ ಮಾಸದ ಹೊತ್ತಲ್ಲೇ ಒಂದಾನೊಂದು ಕಾಲದಲ್ಲಿ ಯಶಸ್ವಿಯಾಗಿದ್ದ ‘ಏಕ್‌ ದೂಜೆ ಕೇ ಲಿಯೇ’ ಹಿಂದಿ ಚಿತ್ರದ ಕನ್ನಡ ರೀಮೇಕಲ್ಲಿ ಅದೇ ಮಗನನ್ನು ನಾಯಕನನ್ನಾಗಿಸಲು ಮದನ್‌ ಹೊರಟಿದ್ದಾರೆ.

ಮದನ್‌ ಮಲ್ಲು ಎಂಬ ಹೆಸರಿನ ನಸೀಬು ಸರಿಯಿಲ್ಲ ಅಂತ ಮಲ್ಲು ತೆಗೆದು, ಪಟೇಲ್‌ ಎಂಬ ಪುಗ್ಗ ಸೇರಿಸಿಕೊಂಡಿರುವ ಮಾಜಿ ಕನ್ನಡ ಸೆಕ್ಸ್‌ ಚಿತ್ರಗಳ ಈ ನಾಯಕ ಮದನ್‌ ಸುಮ್ಮನಿರುವ ಜಾಯಮಾನದವರಲ್ಲ. ಈಗ ಅವರು ಮಾಡಹೊರಟಿರುವುದು ಡಬ್ಬಲ್‌ ಸಾಹಸ. ‘ಏಕ್‌ ದೂಜೆ ಕೇ ಲಿಯೇ’ ಚಿತ್ರವನ್ನು ಕನ್ನಡದಲ್ಲಷ್ಟೇ ಅಲ್ಲದೆ ತಮಿಳು ಭಾಷೆಯಲ್ಲೂ ತೆಗೆಯುವುದು ಅವರ ಉದ್ದೇಶ. ತಮಿಳು ಚಿತ್ರದಲ್ಲೂ ಮಯೂರನೇ ನಾಯಕ.

ಮದನ್‌ ಮಾಡ ಹೊರಟಿರುವ ಈ ಸಾಹಸಕ್ಕೆ ತಮಿಳು ಚಿತ್ರಗಳ ನಿರ್ದೇಶಕ ಭಾರತೀ ಕಣ್ಣನ್‌ ಕಾರಣ. ಮಯೂರ್‌ ನಟಿಸಿರುವ ಮಣಿ ಚಿತ್ರವನ್ನು ನೋಡಿ ಪುಳಕಿತರಾದ ಕಣ್ಣನ್‌, ‘ಏಕ್‌ ದೂಜೆ ಕೇ ಲಿಯೇ’ ಚಿತ್ರದ ರೀಮೇಕ್‌ ಸಲಹೆ ಕೊಟ್ಟರಂತೆ. ಈ ಚಿತ್ರವನ್ನು ತಾವೇ ನಿರ್ದೇಶಿಸಲೂ ಒಪ್ಪಿದ್ದಾರಂತೆ.

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಕಮಲ ಹಾಸನ್‌ ಚಿತ್ರಗಳದ್ದೇ ಭರಾಟೆ. ‘ನಾಯಗನ್‌’, ‘ಸ್ವಾತಿ ಮುತ್ಯಂ’ ಚಿತ್ರಗಳ ಮೇಲೆ ಸುದೀಪ್‌ ಮತ್ತು ಮಿತ್ರರು ಕಣ್ಣು ಹಾಕಿದ್ದಾರೆ. ಈಗ ಮದನ್‌ ಸರದಿ. ಎತ್ತಣ ಕಮಲ್‌, ಎತ್ತಣ ಮದನ !

Post Your Views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada