»   » ಆಟೋ ಚಲಿಸಿದೆ! ಬಸವ ನುಗ್ಗಿದ್ದಾನೆ!

ಆಟೋ ಚಲಿಸಿದೆ! ಬಸವ ನುಗ್ಗಿದ್ದಾನೆ!

Posted By:
Subscribe to Filmibeat Kannada

ನಟ ಉಪೇಂದ್ರ, ಶಿಲ್ಪಾ ಶೆಟ್ಟಿ ಮತ್ತು ರಾಧಿಕಾ ಅಭಿನಯದ ‘ಆಟೋ ಶಂಕರ್‌’ ಚಿತ್ರದ ಯಶಸ್ಸಿನಿಂದ ನಿರ್ಮಾಪಕ ರಾಮು ಹಿರಿಹಿರಿ ಹಿಗ್ಗಿದ್ದಾರೆ. ಮತ್ತೊಂದೆಡೆ ಪುನೀತ್‌ರ ಗೆಲುವಿನ ಯಾತ್ರೆ ಮುಂದುವರೆದಿದೆ. ಅವರ ‘ನಮ್ಮ ಬಸವ’ ಚಿತ್ರ ಶತದಿನದ ಸಂಭ್ರಮದಲ್ಲಿದೆ.

ಅಪ್ಪು, ಅಭಿ, ವೀರ ಶಂಕರ್‌, ಮೌರ್ಯ, ಆಕಾಶ್‌, ನಮ್ಮ ಬಸವ -ಹೀಗೆ ಪುನೀತ್‌ ಅವರ ಅರ್ಧ ಡಜನ್‌ ಚಿತ್ರಗಳು ಶತದಿನದ ರುಚಿ ಕಂಡಿವೆ. ಪುನೀತ್‌ ಪಾಲಿಗೆ ಮುಟ್ಟಿದ್ದೆಲ್ಲ ಚಿನ್ನ! ಹೀಗಾಗಿ ಅವರ ಸಂಭಾವನೆಯೂ ಚಿನ್ನದ ಬೆಲೆಯಂತೆಯೇ ಗಗನಮುಖಿ!

‘ಕನ್ನಡ ಚಿತ್ರರಂಗದಲ್ಲಿ ಹಿತಾನುಭವದ ಪರ್ವ’ ಎನ್ನುವವರ ಮಾತಿಗೆ ಪುಷ್ಟಿ ನೀಡುವಂತೆ, ಇತ್ತೀಚೆಗೆ ಬಿಡುಗಡೆಯಾಗಿರುವ ‘ರಾಮ ಶಾಮ ಭಾಮ’ ಮತ್ತು ‘ಸಖ ಸಖಿ’ ಚಿತ್ರಗಳು ಪ್ರೇಕ್ಷಕರ ಸೆಳೆದಿವೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada