»   » ಈಗ ಮಾಸ್ಟರ್‌ ಕಿಶನ್‌ ಚಿತ್ತ, ಲಂಡನ್‌ನತ್ತ...!?

ಈಗ ಮಾಸ್ಟರ್‌ ಕಿಶನ್‌ ಚಿತ್ತ, ಲಂಡನ್‌ನತ್ತ...!?

Posted By:
Subscribe to Filmibeat Kannada


ನನ್ನ ಮಗನ ಚಿತ್ರ ಕೊನೆಗೂ ಫುಟ್‌ಪಾತ್‌ ಮೇಲೆ ಬೀಳಲಿಲ್ಲ... ಹೆತ್ತವರ ಸಂಭ್ರಮ...

‘ಕೇರ್‌ ಆಫ್‌ ಫುಟ್‌ಪಾತ್‌’ ನಿರ್ದೇಶಿಸಿದ ಜಗತ್ತಿನ ಅತ್ಯಂತ ಕಿರಿಯ ನಿರ್ದೇಶಕ ಮಾಸ್ಟರ್‌ ಕಿಶನ್‌, ಸಿನೆಮಾಟೋಗ್ರಫಿ ಹಾಗೂ ಗ್ರಾಫಿಕ್‌ ಡಿಸೈನಿಂಗ್‌ ಕಲಿಯಲು ಮೂರು ವರ್ಷಕಾಲ ಲಂಡನ್‌ಗೆ ತೆರಳಲು ನಿರ್ಧರಿಸಿದ್ದಾನೆ.

ಇದಕ್ಕಾಗಿ ಕಿಶನ್‌, ಈಗಾಗಲೇ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅವನ ಚಿಕ್ಕವಯಸ್ಸು ಇದಕ್ಕೆ ತೊಡಕುಂಟು ಮಾಡುವಂತಿದೆ(ಕೇರ್‌ ಆಫ್‌ ಫುಟ್‌ಪಾತ್‌ ಚಿತ್ರದಲ್ಲಿ ಆತ ಹೋರಾಟ ಮಾಡುವಂತೆ). ಈ ಮಧ್ಯೆಸಿನಿಮಾ, ಬಾಕ್ಸ್‌ ಆಫೀಸಿನಲ್ಲಿ ಚೇತರಿಕೆ ಕಂಡಿದೆ. ಧ್ವನಿ ಸುರುಳಿ ಮಾರಾಟವೂ ಚೆನ್ನಾಗಿ ಸಾಗಿದೆ ಎನ್ನುತ್ತಾರೆ ಕಿಶನ್‌ ತಂದೆ ಶ್ರೀಕಾಂತ್‌.

ಮೊದಲು ಆರು ಪ್ರಿಂಟ್‌ ಹಾಕಿಸಿದ್ದೆವು. ಈಗ ಒಂಬತ್ತು ಪ್ರಿಂಟುಗಳಾಗಿವೆ. ಆಗ ಸಿಕ್ಕಿದ್ದು ಆರು ಚಿತ್ರಮಂದಿರಗಳು. ಈಗ ಆ ಸಂಖ್ಯೆ 12 ತಲುಪಿದೆ. ಇನ್ನೂ ಐದು ಚಿತ್ರಮಂದಿರಗಳಿಂದ ಬೇಡಿಕೆ ಬಂದಿದೆಯಂತೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸುವ ಕಿಶನ್‌ ತಾಯಿ ಶ್ರೀಶೈಲಾ, ಮೊದಮೊದಲು ನಾವು, ಚಿತ್ರಮಂದಿಗಳ ಬಾಲ್ಕನಿ ಮಾತ್ರ ತುಂಬಬಹುದು ಎಂದುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಉಲ್ಟಾ ಆಗಿ, ಗಾಂಧೀಕ್ಲಾಸ್‌ ಭರ್ತಿಯಾಗಿತ್ತು. ಈಗ ಗಾಂಧೀಕ್ಲಾಸ್‌, ಎರಡನೇ ಕ್ಲಾಸ್‌ ಹಾಗೂ ಬಾಲ್ಕನಿ ಮೂರೂ ವಿಭಾಗಗಳಿಗೂ ಜನ ಬರುತ್ತಿದ್ದಾರೆ. ನನ್ನ ಮಗನ ಚಿತ್ರ ಫುಟ್‌ಪಾತ್‌ ಮೇಲೆ ಬೀಳಲಿಲ್ಲ. ಇದಕ್ಕಾಗಿ ನಾನು ದೇವರು ಹಾಗೂ ಸಮಸ್ತ ಕನ್ನಡ ನಾಡಿಗರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada