»   » ಮದರ್‌ ತೆರೆಸಾ ಪ್ರತಿಮೆ ಪಕ್ಕದಲ್ಲಿ ನಿಂತಾಗ !

ಮದರ್‌ ತೆರೆಸಾ ಪ್ರತಿಮೆ ಪಕ್ಕದಲ್ಲಿ ನಿಂತಾಗ !

Posted By: Super
Subscribe to Filmibeat Kannada

I am Aishwarya Rai and I am also from Karnataka. Ma, please bless me- ಕೋಲ್ಕತಾದ ಮದರ್‌ ತೆರೆಸಾ ಮಿಷನರಿಯಲ್ಲಿ ಐಶ್ವರ್ಯ ರೈ ಹೀಗೆ ಕೇಳುತ್ತಾ ಅಕ್ಷರಶಃ ಮಗುವಂತಾಗಿದ್ದಳು. ಅವಳ ಮುಂದೆ ತೊಂಬತ್ತು ವಯಸ್ಸಿನ ಸಿಸ್ಟರ್‌ ನಿಂತಿದ್ದರು. ಐಶ್ವರ್ಯ ಕಣ್ಣಂಚಲಿ ತೇವ ಆಡುತ್ತಿತ್ತು.

ಅಪ್ಪಟ ಭಕ್ತೆಯ ಚಹರೆ ಹೊತ್ತಿದ್ದ ಐಶ್ವರ್ಯ ನವೆಂಬರ್‌ 17ನೇ ತಾರೀಕು ಅಲ್ಲಿದ್ದದ್ದು ಒಂದೇ ತಾಸು. ಆದರೆ, ಆಕೆಯೇ ಹೇಳುವಂತೆ ಪಡೆದುಕೊಂಡ ಅನುಭವ ಅನನ್ಯ.

ಸಹರಾ ಇಂಡಿಯಾದ ಟ್ರೇಡ್‌ ಮಾರ್ಕಿನ ಸೀರೆ ಉಟ್ಟು ಭಾರತ ನಾರಿಯಂತೆ ಕಂಗೊಳಿಸುತ್ತಿದ್ದ ರೈ ಒಳಗಿನ ತತ್ವಜ್ಞಾನಿ ಮಾತಾಡಿದ್ದು ಹೀಗೆ- ನನ್ನ ಗುರಿ ಯಾವುದು ಅಂತ ನನಗೆ ಗೊತ್ತಾಗಬೇಕಿದೆ. ಭಗವಂತ ನನ್ನನ್ನು ಎಲ್ಲಿಗೆ ಮುಟ್ಟಿಸಬೇಕೆಂದಿದ್ದಾನೋ, ಅಲ್ಲಿಗೆ ತಲುಪಲು ನನಗೆ ಇಲ್ಲಿನ ಹಿರಿಯರ ಆಶೀರ್ವಾದ ಬೇಕಿದೆ. ಮದರ್‌ ತೆರೆಸಾ ಯಾವತ್ತಿಗೂ ನನ್ನ ಹೃದಯದಲ್ಲಿ ನಿಂತಿರುತ್ತಾರೆ. ಅವರು ಅಡ್ಡಾಡಿದ ಈ ಜಾಗದಲ್ಲಿ ಇವತ್ತಿಗೂ ಸಿಗುವ ಅನುಭವ ಮನಸ್ಸನ್ನು ತಣ್ಣಗೆ ಮಾಡುತ್ತದೆ. ನಾನಿಲ್ಲಿಗೆ ಬಂದು ಕೃತಾರ್ಥಳಾದೆ.

ಸಹಾರದವರು ಕೊಟ್ಟ 11 ಲಕ್ಷ ರುಪಾಯಿ ದೇಣಿಗೆ ಹಣವನ್ನು ಮಿಷನರಿಗೆ ಒಪ್ಪಿಸಿದ ಐಶ್ವರ್ಯಾ, ಅಲ್ಲಿದ್ದ ಮಕ್ಕಳಿಗೆ ಉಡುಗೊರೆಗಳನ್ನು ಹಂಚಿದರು. ಕಾಲಿಲ್ಲದ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು ಹಂಚಿದರು. ಅಭಿಮಾನಿ ಬಳಗ ಸುತ್ತುಗಟ್ಟಿ, ಮೆಚ್ಚಿನ ನಟಿಯಿಂದ ಸಹಿ ಪಡೆದುಕೊಂಡರು. ಯಾರೋ ಒಬ್ಬಾಕೆಯಂತೂ 'ಪಾರೋ ಅಂತ ಬರೆಯಿರಿ. ದೇವದಾಸ್‌ನಲ್ಲಿ ನೀವು ಪಾರೋ ಆಗಿ ನನ್ನ ಮನಸ್ಸನ್ನು ಗೆದ್ದಿದ್ದೀರಿ" ಅಂದಳು. ಹಿನ್ನೆಲೆಯಾಗಿ ದೇವದಾಸ್‌ ಚಿತ್ರದ 'ಡೋಲಾ ರೇ" ಹಾಡು ಉಲಿಯುತ್ತಿತ್ತು.

English summary
I am from Karnataka, Bless me : Aishwarya Rai

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada