ಮಂಗಳೂರಿನಲ್ಲಿ ಬಾಂಬ್ ಇಟ್ಟ ಆದಿತ್ಯರಾವ್ ಹೆಸರಿನಲ್ಲಿ ಸಿನಿಮಾ
ಕಳೆದ ಕೆಲವು ದಿನಗಳ ಹಿಂದೆ ರಾಜ್ಯಾದಂತ್ಯ ಮಂಗಳೂರು ಬಾಂಬ್ ಪ್ರಕರಣ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಆ ಬಗ್ಗೆ ಕನ್ನಡದಲ್ಲಿ ಸಿನಿಮಾ ಬರುತ್ತಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯರಾವ್ ಹೆಸರಿನಲ್ಲಿ ಸಿನಿಮಾದ ಟೈಟಲ್ ರಿಜಿಸ್ಟರ್ ಆಗಿದೆ. '1st ರಾಂಕ್ ಟೆರರಿಸ್ಟ್' ಎಂಬ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಲಾಗಿದೆ. ನಿರ್ಮಾಪಕ ತುಳಸಿರಾಮ್ ಎಂಬುವವರ ಬಳಿ ಈ ಟೈಟಲ್ ಇದೆ.
ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯರಾವ್ ಬೆಂಗಳೂರಲ್ಲಿ ಶರಣಾಗಿದ್ದು ಈ ಕಾರಣಕ್ಕಾಗಿ!
'1st ರಾಂಕ್ ಟೆರರಿಸ್ಟ್' ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಆಗಿದ್ದು, ಮಂಗಳೂರು ಬಾಂಬ್ ಪ್ರಕರಣವೇ ಸಿನಿಮಾದ ಕಥೆಯಾಗುತ್ತದೆಯೇ ಎನ್ನುವ ಅನುಮಾನವೂ ಇದೆ. ಆ ಟೈಟಲ್ ಇಟ್ಟುಕೊಂಡು ಟೆರರಿಸ್ಟ್ ಬಗ್ಗೆ ಬೇರೊಂದು ಕಥೆಯೂ ಮಾಡಬಹುದು.

ಮತ್ತೊಂದು ಕಡೆ ಈ ಬಗ್ಗೆ ನಿಜವಾಗಿಯೂ ಸಿನಿಮಾ ಬರುತ್ತದೆಯೇ ಎನ್ನುವ ಅನುಮಾನವೂ ಇದೆ. ಏಕೆಂದರೆ, ಈಗಾಗಲೇ ದೊಡ್ಡ ಮಟ್ಟದ ಸುದ್ದಿ ಮಾಡಿದ ಅನೇಕ ಟೈಟಲ್ ಗಳು ರಿಜಿಸ್ಟರ್ ಆಗಿದ್ದು, ಇನ್ನು ಆ ಸಿನಿಮಾ ಬಂದಿಲ್ಲ.
ಮಂಗಳೂರಿಗೆ ಬಾಂಬರ್ ಆದಿತ್ಯ ರಾವ್: ವಿವರವಾದ ವಿಚಾರಣೆಗೆ ಪೊಲೀಸ್ ಸಜ್ಜು
ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 'ನಿಖಿಲ್ ಎಲ್ಲಿದಿಯಪ್ಪ' ಎಂಬ ಪದ ದೊಡ್ಡ ಟ್ರೆಂಡ್ ಆಗಿತ್ತು. ಅದೇ ಹೆಸರಿನಲ್ಲಿ ಚಿತ್ರದ ಟೈಟಲ್ ರಿಜಿಸ್ಟರ್ ಆಯ್ತು.


Click it and Unblock the Notifications











