»   » ಮೊದಲ ಮೂರು ದಿನದಲ್ಲಿ 'ಚೌಕ' ಗಳಿಸಿದ್ದೆಷ್ಟು ಗೊತ್ತಾ?

ಮೊದಲ ಮೂರು ದಿನದಲ್ಲಿ 'ಚೌಕ' ಗಳಿಸಿದ್ದೆಷ್ಟು ಗೊತ್ತಾ?

Posted By:
Subscribe to Filmibeat Kannada

ಸದ್ಯ, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ದ್ವಾರಕೀಶ್ ನಿರ್ಮಾಣದ 'ಚೌಕ' ಚಿತ್ರದ್ದೇ ಸೌಂಡ್. ಬಿಡುಗಡೆಯಾದ ಮೊದಲ ದಿನದಿಂದಲೂ ಯಶಸ್ವಿ ಪ್ರದರ್ಶನವಾಗುತ್ತಿರುವ 'ಚೌಕ', ಬಾಕ್ಸ್ ಆಫೀಸ್ ನಲ್ಲೂ ಪರಾಕ್ರಮ ಮೆರೆಯುತ್ತಿದೆ.

ಸಾಮಾಜಿಕ ಸಂದೇಶದ ಜೊತೆ ಮನರಂಜನಾತ್ಮಕವಾಗಿ ಮೂಡಿ ಬಂದಿರುವ 'ಚೌಕ', ನಾಲ್ಕು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರವನ್ನ ಹೊಂದಿದೆ.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']

1st Week Box Office Collection of Kannada Movie Chowka

ಪ್ರೇಕ್ಷಕ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡಿರುವ 'ಚೌಕ' ಮೊದಲ ಎರಡು ದಿನದಲ್ಲಿ ಸುಮಾರು 2.3 ಕೋಟಿ ಗಳಿಕೆ ಕಂಡಿತ್ತು. ಇದೀಗ ಮೊದಲ ಮೂರು ದಿನಗಳಲ್ಲಿ 'ಚೌಕ' ಕಲೆಕ್ಷನ್ ಮೊತ್ತ 4 ಕೋಟಿ ದಾಟಿದೆ ಎನ್ನಲಾಗುತ್ತಿದೆ.['ಚೌಕ' ಚಿತ್ರದ 20 ನಿಮಿಷ ದೃಶ್ಯಕ್ಕೆ ಕತ್ತರಿ!]

ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರೇಮ್, ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್, ಭಾವನಾ, ಐಂದ್ರಿತಾ ರೈ, ದೀಪಾ ಸನ್ನಿಧಿ, ಪ್ರಿಯಾಮಣಿ ಹಾಗೂ ವಿಶೇಷ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದಾರೆ. ಫೆಬ್ರವರಿ 3 ರಂದು ಚೌಕ ಚಿತ್ರದ ರಾಜ್ಯಾದ್ಯಂತ ತೆರೆಕಂಡಿತ್ತು.

English summary
1st week box offeice collection of Kannada Movie Chowka. According to sorce Chowka has collect around 4 crores in st weekend.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada