ಚೀನಾ ಬಾಕ್ಸ್ ಆಫೀಸ್ ನಲ್ಲಿ '2.0' ದಾಖಲೆ: 1000 ಕೋಟಿ ಕ್ಲಬ್ ಸೇರ್ತಾರ ತಲೈವಾ?
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದ '2.0' ಸಿನಿಮಾ 543 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆಕಂಡಿದ್ದ 2.0 ವರ್ಲ್ಡ್ ವೈಡ್ 625 ಕೋಟಿ ಗಳಿಸಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದ್ದರೂ ಗಳಿಕೆಯಲ್ಲಿ ಎಲ್ಲೂ ಹಿಂದೆ ಬಿದ್ದಿರಲಿಲ್ಲ.
Recommended Video
ಇದೀಗ, ಸೆಪ್ಟೆಂಬರ್ 6 ರಂದು ಚೀನಾದಲ್ಲಿ ರಜನಿಕಾಂತ್ ಸಿನಿಮಾ ಬಿಡುಗಡೆಯಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರಗಳಿಗೆ ಭಾರಿ ಬೇಡಿಕೆಯಿದ್ದು, 48 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ 2.0 ರಿಲೀಸ್ ಆಗಿದೆ. ಚೀನಾ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಸ್ಕ್ರೀನ್ ಗಳಲ್ಲಿ ತೆರೆಕಂಡ ಮೊದಲ ಭಾರತೀಯ ಚಿತ್ರ ಇದಾಗಿದೆ.

ಬಾಲಿವುಡ್ ಚಿತ್ರ ವಿಶ್ಲೇಷಕ ಎಲ್.ಎಂ ಕೌಶಿಕ್ ಅವರು ಗಳಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಮೊದಲ ದಿನ 9 ಕೋಟಿ ಗಳಿಕೆ ಕಂಡಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಲ್ಮಾನ್ ಅವರ ಸುಲ್ತಾನ್ ಚಿತ್ರವನ್ನ ಹಿಂದಿಕ್ಕಿದೆ.
2.0 ಚಿತ್ರ 1000 ಸಾವಿರ ಕೋಟಿ ಕ್ಲಬ್ ಸೇರಲು 375 ಕೋಟಿಯ ಅಗತ್ಯವಿದೆ. ಚೀನಾದಲ್ಲಿ ಮೊದಲ ದಿನ ಒಳ್ಳೆಯ ಒಪನಿಂಗ್ ಮಾಡಿರುವ ರಜನಿ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಲು ಸಹಾಕಾರಿಯಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಚೀನಾ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 1300 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಬಾಹುಬಲಿ ಎರಡನೇ ಸ್ಥಾನದಲ್ಲಿದೆ.


Click it and Unblock the Notifications











