ಚೀನಾದಲ್ಲಿ ರಜನಿಕಾಂತ್ ಚಿತ್ರಕ್ಕೆ ಭಾರಿ ಮುಖಭಂಗ
Recommended Video
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗಿದೆ. ಸುಮಾರು 48 ಸಾವಿರ ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದ ತಲೈವಾ ಚಿತ್ರಕ್ಕೆ ಭಾರಿ ಮುಖಭಂಗ ಆಗಿದೆ.
ಅಮೀರ್ ಖಾನ್ ಅಭಿನಯದ 'ದಂಗಲ್' ಮತ್ತು 'ಬಾಹುಬಲಿ' ಚಿತ್ರಗಳಿಗೆ ಚೀನಾದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಸಹಜವಾಗಿ ಭಾರತೀಯ ಚಿತ್ರಗಳಿಗೆ ಚೀನಾದಲ್ಲಿ ಒಳ್ಳೆಯ ರೆಸ್ಪಾನ್ಸ್ ಇದೆ. ಹಾಗಾಗಿ, 2.0 ಸಿನಿಮಾ ರಿಲೀಸ್ ಆಗುತ್ತಿದ್ದ ಸಮಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಕೊಂಡಿತ್ತು.
ಆದರೆ ಚೀನಾ ಬಾಕ್ಸ್ ಆಫೀಸ್ 2.0 ಸಿನಿಮಾ ಮಕಾಡೆ ಮಲಗಿದೆ. ಮೊದಲ ದಿನ ಕೇವಲ 8 ಕೋಟಿ ಗಳಿಸಿದ್ದ ರೋಬೋ 2 ಮೂರು ದಿನಕ್ಕೆ 18 ಕೋಟಿ ಮಾತ್ರ ಗಳಿಸಿದೆ. ಇದು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.
ಸುಮಾರು 543 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ 2.0 ಜಗತ್ತಿನಾದ್ಯಂತ 625 ಕೋಟಿ ಗಳಿಸಿತ್ತು. ಚೀನಾದಲ್ಲಿ ದೊಡ್ಡ ಯಶಸ್ಸು ಸಿಗಬಹುದು, ಗಳಿಕೆಯಲ್ಲಿ ರಜನಿಕಾಂತ್ ಸಿನಿಮಾ ಸಾವಿರ ಕೋಟಿ ಗಡಿದಾಟಬಹುದು ಎಂಬ ಲೆಕ್ಕಾಚಾರ ಇತ್ತು.

ಇದೀಗ, ಚೀನಾ ಬಾಕ್ಸ್ ಆಫೀಸ್ ನಲ್ಲಿ 2.0 ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ಚೀನಾದಲ್ಲಿ 100 ಕೋಟಿ ಗಳಿಸುವುದು ಕೂಡ ಅನುಮಾನವಾಗಿದೆ. ರಜನಿ ಜೊತೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಚಿತ್ರಗಳಿಗೆ ಚೀನಾದಲ್ಲಿ ಒಳ್ಳೆಯ ಬೇಡಿಕೆ ಇದೆ. ಹಾಗಿದ್ದರೂ ಚೀನಾ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಸೋತಿದೆ.
ಚೀನಾ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 1300 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಬಾಹುಬಲಿ ಎರಡನೇ ಸ್ಥಾನದಲ್ಲಿದೆ.


Click it and Unblock the Notifications











