For Quick Alerts
  ALLOW NOTIFICATIONS  
  For Daily Alerts

  ಈ ದೇಶದ 55 ಸಾವಿರ ಸ್ಕ್ರೀನ್ ನಲ್ಲಿ ಬಿಡುಗಡೆಯಾಗುತ್ತಿದೆ ರಜನಿ '2.0'

  |

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಗಳಿಕೆಯಲ್ಲಿ ಹಿಂದೆ ಬೀಳದ ರೋಬೋ 2 ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿತು.

  543 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಮೆಗಾ ಸಿನಿಮಾ ಸುಮಾರು 800 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. 2018ರ ಸೆಪ್ಟೆಂಬರ್ 29 ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು.

  ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು

  ಇದೀಗ, 2.0 ಸಿನಿಮಾ ಚೀನಾ ದೇಶದಲ್ಲಿ ರಿಲೀಸ್ ಆಗುತ್ತಿದೆ. ಜುಲೈ 12 ರಂದು ರಜನಿ ಸಿನಿಮಾ ಚೀನಾದಲ್ಲಿ ತೆರೆಕಾಣುತ್ತಿದ್ದು, ಸುಮಾರು 55 ಸಾವಿರ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಲಿದೆಯಂತೆ.

  ಚೀನಾದಲ್ಲಿ ಅಮೀರ್ ಖಾನ್ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದ್ದು, ಒಳ್ಳೆಯ ಬಿಸಿನೆಸ್ ಕೂಡ ಮಾಡಿದೆ. ಆದರೆ ಬಾಹುಬಲಿ ಚಿತ್ರದ ಎರಡು ಭಾಗವೂ ಚೀನಾದಲ್ಲಿ ನಿರೀಕ್ಷಿತ ಆದಾಯ ಗಳಿಸಿಲ್ಲ.

  Big Breaking: ವೀಕೆಂಡ್ ವಿತ್ ರಮೇಶ್ ನಲ್ಲಿ ರಜನಿಕಾಂತ್, ರಾಜಮೌಳಿ.!

  ಇನ್ನುಳಿದಂತೆ ಶಂಕರ್ ನಿರ್ದೇಶನ ಮಾಡಿದ್ದ 2.0 ಚಿತ್ರವನ್ನ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು. 2010ರಲ್ಲಿ ರಿಲೀಸ್ ಆಗಿದ್ದ ಎಂಥಿರನ್ ಸಿನಿಮಾದ ಮುಂದುವರಿದ ಭಾಗ ಇದಾಗಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್ ಜೊತೆ ಆಮಿ ಜಾಕ್ಸನ್ ನಟಿಸಿದ್ದರು.

  English summary
  Superstar rajinikanth and bollywood star akshay kumar starrer 2.0 movie will releasing in 55 thousand screens in china on july 12th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X