18 ದಿನದಲ್ಲಿ '2.0' ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
Recommended Video

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಈ ವರ್ಷದ ದೊಡ್ಡ ಹಿಟ್. ಬಾಕ್ಸ್ ಆಫೀಸ್ ನಲ್ಲೂ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ.
ಜಗತ್ತಿನಾದ್ಯಂತ ಚಿಂದಿ ಉಡಾಯಿಸಿರುವ 2.0 ಸಿನಿಮಾ ಒಟ್ಟು 710 ಕೋಟಿ ಬಾಚಿಕೊಂಡಿದೆ. ಸದ್ಯ ಪ್ರಾಂತ್ಯವಾರು ಗಳಿಕೆ ನೋಡುವುದಾರೇ ತಮಿಳುನಾಡಿನಲ್ಲಿ ಹೆಚ್ಚು ಕೆಲಕ್ಷನ್ ಮಾಡಿದೆ.
18 ದಿನದಲ್ಲಿ ರಜನಿಕಾಂತ್ ಸಿನಿಮಾ ಚೆನ್ನೈನಲ್ಲಿ 112 ಕೋಟಿ, ಆಂದ್ರ ಮತ್ತು ತೆಲಂಗಾಣದಲ್ಲಿ 87 ಕೋಟಿ, ಕರ್ನಾಟಕದಲ್ಲಿ 46 ಕೋಟಿ, ಕೇರಳದಲ್ಲಿ 21 ಕೋಟಿ ಹಾಗೂ ಇತರೆ ರಾಜ್ಯಗಳಲ್ಲಿ 235 ಕೋಟಿ ಗಳಿಸಿದೆ. ಭಾರತದಲ್ಲಿ ಒಟ್ಟು 501 ಕೋಟಿ ಕೆಲಕ್ಷನ್ ಮಾಡಿದೆ ರಜನಿ ಸಿನಿಮಾ.

ಅದೇ ರೀತಿ ವಿದೇಶದಲ್ಲೂ ಅಬ್ಬರಿಸಿರುವ ತಲೈವಾ ಸಿನಿಮಾ, ಯುಎಸ್, ಆಸ್ಟ್ರೇಲಿಯಾ, ಯುಕೆ, ನ್ಯೂಜಿಲ್ಯಾಂಡ್, ಮಲೇಷಿಯಾ, ಪಾಕಿಸ್ತಾನ, ಸಿಂಗಾಪೂರ್, ಶ್ರೀಲಂಕಾ, ಕೆನಡಾ, ಹಾಗೂ ಇತರೆ ದೇಶಗಳಲ್ಲಿ ಒಟ್ಟು 114 ಕೋಟಿ ಬಾಚಿಕೊಂಡಿದೆ.
ಒಟ್ಟಾರೆ, 18 ದಿನದಲ್ಲಿ ಜಗತ್ತಿನಾದ್ಯಂತ 645 ಕೋಟಿ ಗಳಿಕೆ ಕಂಡಿದೆ. ಸದ್ಯ ಇಲ್ಲಿಯವರೆಗೂ 710 ಕೋಟಿಗೂ ಅಧಿಕ ಕೆಲಕ್ಷನ್ 2.0 ಚಿತ್ರದ ಖಾತೆಗೆ ಸೇರಿದೆ. ಅಂದ್ಹಾಗೆ, ರಜನಿ ಚಿತ್ರದ ಬಜೆಟ್ 545 ಕೋಟಿ.


Click it and Unblock the Notifications











