»   » ಮತ್ತೆ ಬದಲಾಯ್ತು ರಜನಿಕಾಂತ್ '2.0' ರಿಲೀಸ್ ದಿನಾಂಕ.!

ಮತ್ತೆ ಬದಲಾಯ್ತು ರಜನಿಕಾಂತ್ '2.0' ರಿಲೀಸ್ ದಿನಾಂಕ.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಬದಲಾಗಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ವರ್ಷದ ದೀಪಾವಳಿಗೆ ರಜನಿಕಾಂತ್ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕಾರಣದಿಂದ ದಕ್ಷಿಣ ಭಾರತದ ಈ ದೊಡ್ಡ ಸಿನಿಮಾ 2018ರ ಮೊದಲ ತಿಂಗಳಿಗೆ ನಿಗದಿಯಾಗಿತ್ತು.

ಇದೀಗ, ಆ ದಿನಾಂಕವೂ ಕೂಡ ಬದಲಾಗಿದ್ದು, 'ರೋಬೋ-2' ಮತ್ತಷ್ಟು ದಿನ ಮುಂದಕ್ಕೆ ಹೋಗಿದೆ. ಹಾಗಿದ್ರೆ, ರಜನಿ ಮತ್ತು ಅಕ್ಷಯ್ ಜೋಡಿಯ '2.0' ಯಾವಾಗ ರಿಲೀಸ್ ಆಗುತ್ತೆ ಎಂದು ಮುಂದೆ ಓದಿ....

ಜನವರಿಯಲ್ಲಿಲ್ಲ ರಜನಿಯ '2.0'

ಈ ಮೊದಲು ನಿರ್ಧರಿಸಿದಂತೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0', ಜನವರಿ 25 ರಂದು ಬಿಡುಗಡೆಯಾಗಬೇಕಿತ್ತು. ಆದ್ರೀಗ, ಬಿಡುಗಡೆಯಲ್ಲಿ ಬದಲಾವಣೆ ಆಗಿದ್ದು, ಜನವರಿ ತಿಂಗಳಿನಲ್ಲಿ 'ರೋಬೋ' ಸಿನಿಮಾ ಬರುವುದಿಲ್ಲ ಎನ್ನುವುದು ಖಚಿತವಾಗಿದೆ.

ರಜನಿ '2.0' ಚಿತ್ರಕ್ಕೆ ಸೆಡ್ಡು ಹೊಡೆಯಲಿದೆ ಕನ್ನಡದ ಈ ಸಿನಿಮಾ!

ಏಪ್ರಿಲ್ ನಲ್ಲಿ ಎಂಟ್ರಿ ಪಕ್ಕಾ

ಜನವರಿಯಿಂದ ಮುಂದಕ್ಕೆ ಹೋಗಿರುವ '2.0' ಸಿನಿಮಾ ಏಪ್ರಿಲ್ ನಲ್ಲಿ ತೆರೆಕಾಣಲಿದೆ. ಏಪ್ರಿಲ್ 27 ರಂದು ಜಗತ್ತಿನಾದ್ಯಂತ ರಜನಿ ಸಿನಿಮಾ ರಿಲೀಸ್ ಆಗಲಿದೆ ಎಂದು ಸ್ವತಃ ಚಿತ್ರತಂಡವೇ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದೆ.

'2.0' ಚಿತ್ರದ ಬಗ್ಗೆ ಅಕ್ಷಯ್ ಕುಮಾರ್ ಕೊಟ್ರು ಬ್ರೇಕಿಂಗ್ ನ್ಯೂಸ್.!

'ಪ್ಯಾಡ್ ಮ್ಯಾನ್' ಬರುತ್ತೆ

ಇದಕ್ಕು ಮೊದಲು ರಜನಿಕಾಂತ್ ಅಭಿನಯದ '2.0' ಸಿನಿಮಾ ಜನವರಿಯಲ್ಲಿ ಬರಲಾಗುತ್ತೆ ಎಂಬ ಕಾರಣದಿಂದ ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರ ಮುಂದಕ್ಕೆ ಹೋಗುವ ನಿರ್ಧಾರ ಮಾಡಿತ್ತು. ಈಗ 'ಪ್ಯಾಡ್ ಮ್ಯಾನ್' ಚಿತ್ರ ಯಾವುದೇ ಆತಂಕವಿಲ್ಲದೇ, ಅದೇ ದಿನ ತೆರೆ ಮೇಲೆ ಬರಲಿದೆ.

'ಬಾಹುಬಲಿ' ಆಯ್ತು, ಈಗ ಎಲ್ಲರ ಕಣ್ಣು ಸೂಪರ್ ಸ್ಟಾರ್ ರಜನಿಕಾಂತ್ ಮೇಲೆ.!

ಇತಿಹಾಸ ಮರುಕಳಿಸುತ್ತಾ?

2017ರ ಏಪ್ರಿಲ್ 28ರಂದು ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಬಂದಿತ್ತು. ಇದೀಗ, 2018ರ ಏಪ್ರಿಲ್ 27ರಂದು '2.0' ಎಂಟ್ರಿ ಕೊಡ್ತಿರುವುದರಿಂದ ಇತಿಹಾಸ ಮರುಕಳಿಸುತ್ತಾ ಎಂಬ ಚರ್ಚೆ ಆರಂಭವಾಗಿದೆ.

English summary
Superstar Rajinikanth and bollywood actor Akshay Kumar Starrer 2.0 Release Postponed to April 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada