»   » ರಾತ್ರೋರಾತ್ರಿ ಸುದೀಪ್ ಸೂಪರ್ ಸ್ಟಾರ್ ಆಗ್ತಾರಾ?

ರಾತ್ರೋರಾತ್ರಿ ಸುದೀಪ್ ಸೂಪರ್ ಸ್ಟಾರ್ ಆಗ್ತಾರಾ?

Posted By:
Subscribe to Filmibeat Kannada
<ul id="pagination-digg"><li class="next"><a href="/news/2-actor-kichcha-sudeep-telugu-movie-eega-rajamouli-aid0172.html">Next »</a></li></ul>
Sudeep
ಕನ್ನಡದ ಕಿಚ್ಚ ಸುದೀಪ್ ತೆಲುಗು ಚಿತ್ರದ ಮೂಲಕ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿದ್ದಾರಾ? ಹೀಗೊಂದು ಪ್ರಶ್ನೆ ದಕ್ಷಿಣ ಭಾರತದ ಸಿನಿಪ್ರೇಕ್ಷಕರು ಹಾಗೂ ಸಿನಿಪಂಡಿತರಲ್ಲಿ ಎದ್ದಿದೆ. ಕಾರಣ ಎಸ್ ಎಸ್ ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ 'ಈಗ'. ಯಶಸ್ವೀ ನಿರ್ದೇಶಕ ಎಂದೇ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕನ್ನಡಿಗ, ನಿರ್ದೇಶಕ ರಾಜಮೌಳಿ ಕೂಡ ಈ ಅಭಿಪ್ರಾಯವನ್ನು ಸಮರ್ಥಿಸುತ್ತಾರೆ.

ರಾಜಮೌಳಿ ನಿರ್ದೇಶಿಸಿದ ಯಾವ ಚಿತ್ರವೂ ನೆಲಕಚ್ಚಿದ್ದೇ ಇಲ್ಲ. ಸೈ, ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮಗಧೀರ, ಮರ್ಯಾದಾ ರಾಮಣ್ಣ ಹೀಗೆ ಎಲ್ಲಾ ಚಿತ್ರಗಳಲ್ಲಿ ನಟಿಸಿರುವ ನಟರ ಹಣೆಬರಹ ಬದಲಾಗಿ ಅವರೆಲ್ಲಾ ತೀರಾ ಮೇಲೇರಿದ್ದಾರೆ. ಇದೀಗ ಆ ಪಟ್ಟಿಯಲ್ಲಿ ಸುದೀಪ್ ಸೇರುವುದು ಖಚಿತ ಎನ್ನಲಾಗುತ್ತಿದೆ.

ಏಪ್ರಿಲ್ 5ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ ಎನ್ನಲಾಗುತ್ತಿರುವ ಈಗ ಚಿತ್ರಕ್ಕೆ ಇಡೀ ಸೌತ್ ಇಂಡಿಯಾ ಕಾಯುವಂತಾಗಿದೆ. 'ಈಗ' ಎಂದರೆ ನೊಣ. ಈ ಚಿತ್ರದಲ್ಲಿ ನಾಯಕ ಸುದೀಪ್ ಅಲ್ಲ, ನಾಣಿ ಹೀರೋ. ಸಮಂತಾ ನಾಯಕಿ. ಸುದೀಪ್ ಖಳನಾಯಕ. ಆದರೆ ಸುದೀಪ್ ಅವರದು ಮೂಲಗಳ ಪ್ರಕಾರ ನಾಯಕನನ್ನು ಮೀರಿಸುವ ಪಾತ್ರ. ಆ ಪಾತ್ರಕ್ಕೆ ಸುದೀಪ್ ಚೆನ್ನಾಗಿಯೇ ಜೀವ ತುಂಬಿದ್ದಾರಂತೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/2-actor-kichcha-sudeep-telugu-movie-eega-rajamouli-aid0172.html">Next »</a></li></ul>

English summary
Kannada Actor Kichcha Sudeep acted in Telugu Movie Eega, which is directed by Rajamouli. It is said that Sudeep will become Super Star by this Telugu movie Eega. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more