For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಟೋಪಿವಾಲಾಗೆ ಮಲ್ಲು ಬೆಡಗಿ ಭಾವನಾ

  By Rajendra
  |

  ಬಹುಭಾಷಾ ತಾರೆ ಮಲ್ಲು ಬೆಡಗಿ ಭಾವನಾ ಮತ್ತೊಂದು ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಟೋಪಿವಾಲಾ' ಚಿತ್ರದಲ್ಲಿ ಅಭಿನಯಿಸಿದಲಿದ್ದಾರೆ. ಭಾವನಾ ಅಭಿನಯಿಸುತ್ತಿರುವ ಮೂರನೇ ಕನ್ನಡ ಚಿತ್ರ ಇದಾಗಿದೆ.

  ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯದ 'ಜಾಕಿ' ಹಾಗೂ ಸುದೀಪ್ ಜೊತೆಗಿನ 'ಓನ್ಲಿ ವಿಷ್ಣುವರ್ಧನ' ಚಿತ್ರಗಳು ಬಾಕ್ಸಾಫೀಸಲ್ಲಿ ಉತ್ತಮ ಗಳಿಕೆ ಕಂಡಿದ್ದವು. ಈಗ 'ಟೋಪಿವಾಲಾ' ಚಿತ್ರಕ್ಕೆ ಭಾವನಾ ಆಗಮನವಾಗಿದೆ.

  'ಟೋಪಿವಾಲಾ' ಚಿತ್ರಕ್ಕೆ ಉಪೇಂದ್ರ ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶ್ರೀನಿವಾಸ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ರಾಜಕೀಯ ಸಂಗತಿಗಳ ಸುತ್ತ ಕತೆ ಸುತ್ತುತ್ತದೆ. ವಿ ಹರಿಕೃಷ್ಣ ಸಂಗೀತ ಹಾಗೂ ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ ಟೋಪಿವಾಲಾ ಚಿತ್ರಕ್ಕಿದೆ. (ಏಜೆನ್ಸೀಸ್)

  English summary
  Actress Bhavana will play the leading lady in the movie Topiwala opposite Upendra. Earlier the actress played in Only Vishnuvardhana and Jackie. Upendra has penned the story, screenplay and dialogues for Topiwala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X