ಕೂಲ್ ಗಣೇಶನಾದ ನವರಸ ನಾಯಕ ಜಗ್ಗೇಶ್
ಗೋಲ್ಡನ್ ಸ್ಟಾರ್ ಗಣೇಶ್ ಕೂಲ್ ಚಿತ್ರದ ಬಳಿಕ ತಣ್ಣಗಾದ ಮೇಲೆ ನವರಸ ನಾಯಕ ಜಗ್ಗೇಶ್ ಈಗ ಕೂಲ್ ಗಣೇಶನಾಗಲು ಹೊರಟಿದ್ದಾರೆ. ಅವರ ಹೊಸ ಚಿತ್ರದ ಹೆಸರು 'ಕೂಲ್ ಗಣೇಶ'. ಜಗ್ಗೇಶ್‌ರ ಎಂದಿನ ಶೈಲಿಯ ಚಿತ್ರವಿದು ಎಂಬುದರಲ್ಲಿ ಎರಡು ಮಾತಿಲ್ಲ.
ವಸಂತ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ಬಿಎಂ ಸುರೇಶ್ ನಿರ್ದೇಶಿಸುತ್ತಿದ್ದಾರೆ. ವಸಂತ್ ಈ ಹಿಂದೆ ಮಿ.ಬಕ್ರ ಹಾಗೂ ಹೃದಯಗಳ ವಿಷ್ಯ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಪಕ್ಕಾ ಮನರಂಜನೆ ಜೊತೆಗೆ ಸಂದೇಶವೂ ಚಿತ್ರದಲ್ಲಿರುತ್ತದಂತೆ. ಉಳಿದ ತಾರಾಗಣದ ವಿವರಗಳು ಇನ್ನಷ್ಟೇ ಹೊರಬೀಳಬೇಕು.
ವಿಜಯ್ ಚಂದ್ರ ಸಂಗೀತ, ಅಶೋಕ್ ಕ್ಯಾಮೆರಾ ಹಾಗೂ ರಾಜೇಶ್ ರಾಮನಾಥ್ ಅವರ ಸಂಭಾಷಣೆ ಚಿತ್ರಕ್ಕಿರುತ್ತದೆ. ಕತೆ, ಚಿತ್ರಕಥೆಯನ್ನೂ ನಿರ್ಮಾಪಕರೇ ಹೆಣೆದಿದ್ದಾರೆ. ಇನ್ನು ಜಗ್ಗೇಶ್‌ರ 'ಮಂಜುನಾಥ ಬಿಎ ಎಲ್‌ಎಲ್‍ಬಿ' ಚಿತ್ರೀಕರಣವೂ ಭರದಿಂದ ಸಾಗಿದೆ. (ಏಜೆನ್ಸೀಸ್)
More from Filmibeat
English summary
Navarasa Nayaka Jaggesh new film titled as Cool Ganesha. Vasanth is the director and BM Suresh is being producing the movie. Music by Vinay Chandra and Cinematography by Ashok.


Click it and Unblock the Notifications











