For Quick Alerts
  ALLOW NOTIFICATIONS  
  For Daily Alerts

  'ಕಾಲಾ' ಗಲಾಟೆ ನಡುವೆ ನಾಳೆ ಎರಡು ಕನ್ನಡ ಸಿನಿಮಾಗಳು ರಿಲೀಸ್

  By Naveen
  |
  ನಾಳೆ ತೆರೆಕಾಣುತ್ತಿವೆ ಎರಡು ಕನ್ನಡ ಸಿನಿಮಾಗಳು..!! | Filmibeat Kannada

  ಇಂದು ರಜನಿಕಾಂತ್ ಅಭಿನಯದ ಕಾಲಾ' ಬಿಡುಗಡೆಯಾಗಿದೆ. ಪ್ರತಿಭಟನೆ ನಡುವೆಯೂ ಕರ್ನಾಟಕದ ಕೆಲವು ಸೆಂಟರ್ ಗಳಲ್ಲಿ ಸಿನಿಮಾ ಪ್ರದರ್ಶನ ನಡೆದಿದೆ. ಆದರೆ 'ಕಾಲಾ' ಗಲಾಟೆಯ ಜೊತೆಗೆ ನಾಳೆ ಎರಡು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

  ಈ ಶುಕ್ರವಾರ ಕನ್ನಡದ 'ಶಿವು ಪಾರು' ಹಾಗೂ 'ಶತಯಾ ಗತಾಯ' ಎಂಬ ಎರಡು ಚಿತ್ರಗಳು ತೆರೆಗೆ ಬರುತ್ತಿವೆ. 'ಶಿವು ಪಾರು' ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆಯಂತೆ. ಅಮೇರಿಕಾ ಸುರೇಶ್, ದಿಶಾ ಪೂವಯ್ಯ ಹೀರೋ ಹಿರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ತ್ರಿವೇಣಿ ಸೇರಿದಂತೆ ನಾಳೆ ಅನೇಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

  'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ? 'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?

  'ಶತಾಯ ಗತಾಯ' ಚಿತ್ರ ಸಹ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ ಹಳ್ಳಿಯೊಂದರಲ್ಲಿ ನಡೆದ ಸತ್ಯ ಘಟನೆಯ ಆಧಾರವಾಗಿ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಈ ಚಿತ್ರ ಸರಣಿ ಕೊಲೆಗಳ ಕಥೆಯಂತೆ. ರಘು ರಾಮಪ್ಪ ಮತ್ತು ಸೋನು ಗೌಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿನಂದನ್ ಜೈನ್ ಸಂಗೀತ ನೀಡಿದ್ದು, ಐದು ಹಾಡುಗಳು ಚಿತ್ರದಲ್ಲಿವೆ. ವಿಜಯ ಪ್ರಕಾಶ್ ಒಂದು ಹಾಡನ್ನು ಹಾಡಿದ್ದಾರೆ.

  'ಶಿವು ಪಾರು' ಹಾಗೂ 'ಶತಯಾ ಗತಾಯ' ಈ ಎರಡು ಚಿತ್ರಗಳು ಹೊಸ ತಂಡದ ಪ್ರಯತ್ನ ಆಗಿದ್ದು, ನಾಳೆ ಈ ಚಿತ್ರತಂಡದ ಭವಿಷ್ಯ ನಿರ್ಧಾರ ಆಗಲಿದೆ.

  English summary
  2 kannada movies are releasing on June 8th. 'Shivu Paru' kannada movie and 'Shathaya Gathaya' kannada movies will release tomorrow (June 8th ).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X