For Quick Alerts
  ALLOW NOTIFICATIONS  
  For Daily Alerts

  ನಾಳೆ ರಿಲೀಸ್ : 'ಎಡಕಲ್ಲು ಗುಡ್ಡದ ಮೇಲೆ' 'ಹಲೋ ಮಾಮ'ನ ಪ್ರಣಯ

  By Naveen
  |

  ನಾಳೆ ಶುಕ್ರವಾರ... ಶುಕ್ರವಾರ ಅಂದರೆ ಹೊಸ ಸಿನಿಮಾ... ಹೀಗಿರುವಾಗ ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದೆ. 'ಎಡಕಲ್ಲು ಗುಡ್ಡದ ಮೇಲೆ' ಮತ್ತು 'ಹಲೋ ಮಾಮ' ಸಿನಿಮಾ ನಾಳೆ ತೆರೆಗೆ ಬರುತ್ತಿದೆ.

  'ಎಡಕಲ್ಲು ಗುಡ್ಡದ ಮೇಲೆ'

  1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ 'ಎಡಕಲ್ಲು ಗುಡ್ಡದ ಮೇಲೆ' ಹೆಸರಿನಲ್ಲಿ ಮತ್ತೆ ಒಂದು ಸಿನಿಮಾ ನಿರ್ಮಾಣ ಆಗಿದೆ. ವಿವಿನ್ ಸೂರ್ಯ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರದಾನ ಕಥೆ ಹೊಂದಿರುವ ಚಿತ್ರವಾಗಿದ್ದು, ಕೌಟುಂಬಿಕ ಮೌಲ್ಯಗಳು ಚಿತ್ರದಲ್ಲಿ ಇದೆಯಂತೆ. ಸಿನಿಮಾದಲ್ಲಿ ಹಿರಿಯ ನಟ ಶ್ರೀನಾಥ್, ದತ್ತಣ್ಣ, ನಟಿ ಭಾರತಿ ವಿಷ್ಣುವರ್ಧನ್‌, ಸಿಹಿಕಹಿ ಚಂದ್ರು, ಪದ್ಮಜಾ ರಾವ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. 'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ನಟ ಇತ್ತೀಚಿಗಷ್ಟೆ ನಿಧನರಾದ ಚಂದ್ರಶೇಖರ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ' ಮತ್ತೆ ಗಾಂಧಿನಗರದ ಚಿತ್ರಮಂದಿರದಲ್ಲಿ 'ದಾರಿ ತಪ್ಪಿದ ಮಗ'

  'ಹಲೋ ಮಾಮ'

  ನಟ ಮೋಹನ್ ಮತ್ತೆ ಒಂದು ಸಿನಿಮಾ ಮಾಡಿದ್ದಾರೆ. 'ಹಲೋ ಮಾಮ' ಸಿನಿಮಾದ ಮೂಲಕ ಮೋಹನ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದ್ದು ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗಲಿದೆ. ಮೋಹನ್ ಈ ಚಿತ್ರದ ನಿರ್ದೇಶನದ ಜೊತೆಗೆ ನಟನೆ ಸಹ ಮಾಡಿದ್ದಾರೆ. ಭೂಮಿಕಾ, ಪೃಥ್ವಿ ಬನವಾಸಿ, ದಿಲೀಪ್, ಅಕ್ರಂ, ಸೌಜನ್ಯಾ ಚಿತ್ರದಲ್ಲಿ ನಟಿಸಿದ್ದಾರೆ.

  ಈ ಎರಡು ಸಿನಿಮಾಗಳ ಜೊತೆಗೆ ರಾಜ್ ಕುಮಾರ್ ಅವರ 'ದಾರಿ ತಪ್ಪಿದ ಮಗ' ಸಿನಿಮಾ ನಾಳೆ ಬೆಂಗಳೂರಿನ ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

  English summary
  2 kannada movies are releasing on may 11th. Edakallu Guddada Mele and Hello Mama movies will release day after tomorrow (May 11th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X