»   » ಈ ವಾರ ದರ್ಶನ್ 'ತಾರಕ್' ಜೊತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ 'ಡ್ರಾಮಾ' ಮಕ್ಕಳು

ಈ ವಾರ ದರ್ಶನ್ 'ತಾರಕ್' ಜೊತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ 'ಡ್ರಾಮಾ' ಮಕ್ಕಳು

Posted By:
Subscribe to Filmibeat Kannada

ಮತ್ತೆ ಶುಕ್ರವಾರ ಬರುತ್ತಿದೆ. ಒಂದು ಕಡೆ ದಸರಾ ಹಬ್ಬದ ಸಂಭ್ರಮವಾದರೆ ಇನ್ನೊಂದು ಕಡೆ ಸಿನಿಮಾಗಳ ಸಂಭ್ರಮವೂ ಜೋರಾಗಿದೆ. ಎಲ್ಲ ಭಾಷೆಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಈ ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಹಾಗೆ ಕನ್ನಡದಲ್ಲಿಯೂ ಎರಡು ಸಿನಿಮಾಗಳು ನಾಳೆ ರಿಲೀಸ್ ಆಗುವುದಕ್ಕೆ ಸಜ್ಜಾಗಿವೆ.

ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ತಾರಕ್' ನಾಳೆ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಇದರ ಜೊತೆಗೆ 'ಡ್ರಾಮಾ ಜೂನಿಯರ್ಸ್' ಮಕ್ಕಳ 'ಎಳೆಯರು ನಾವು ಗೆಳೆಯರು' ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಅಂದಹಾಗೆ, ಈ ವಾರ ತೆರೆಗೆ ಬರುತ್ತಿರುವ ಈ ಸಿನಿಮಾಗಳ ಒಂದಷ್ಟು ವಿವರ ಮುಂದಿದೆ ಓದಿ....

'ತಾರಕ್' ರಿಲೀಸ್

ದರ್ಶನ್ ನಟನೆಯ 'ತಾರಕ್' ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಮಿಲನ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದೊಂದು ಕೌಟುಂಬಿಕ ಕಥೆಯ ಸಿನಿಮಾವಾಗಿದೆ. ಚಿತ್ರದಲ್ಲಿ ಶಾನ್ವಿ ಮತ್ತು ಶೃತಿ ಹರಿಹರನ್ ನಾಯಕಿಯರಾಗಿದ್ದಾರೆ. ನಟ ದೇವರಾಜ್ , ದರ್ಶನ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ತಾರಕ್'ಗೆ ತಾತನಾಗಲು ದೇವರಾಜ್ ವಿಧಿಸಿದ್ದ ಷರತ್ತು ಏನು?

ಸಖತ್ ಕ್ರೇಜ್

'ತಾರಕ್' ಸಿನಿಮಾಗೆ ದೊಡ್ಡ ಮಟ್ಟದ ಕ್ರೇಜ್ ಇದೆ. ಒಂದು ವಾರ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸದ್ಯದ ಮಾಹಿತಿಯಂತೆ ಬೆಂಗಳೂರಿನಲ್ಲಿ ಬೆಳ್ಳಗೆ ಆರು ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದೆ. ನಗರದ ಸಂತೋಷ್ ಸೇರಿದಂತೆ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ 'ತಾರಕ್' ದರ್ಶನ ನೀಡಲಿದ್ದಾನೆ.

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

'ಎಳೆಯರು ನಾವು ಗೆಳೆಯರು'

'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಮಕ್ಕಳ ಅಭಿನಯದ 'ಎಳೆಯರು ನಾವು ಗೆಳೆಯರು' ಚಿತ್ರ ಜೂನ್ 2 ರಂದು ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಈಗ ಆ ಸಿನಿಮಾ ಮತ್ತೆ ಮರುಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಸ್ವಪ್ನ ಚಿತ್ರಮಂದಿರ ಸೇರಿದಂತೆ ಮೈಸೂರು, ಹುಬ್ಬಳ್ಳಿ, ತುಮಕೂರು ರೀತಿಯ ಜಿಲ್ಲೆಗಳಲ್ಲಿ ಸಿನಿಮಾ ನಾಳೆ ರೀ ರಿಲೀಸ್ ಆಗುತ್ತಿದೆ.

ಚಿತ್ರದ ಬಗ್ಗೆ

'ಎಳೆಯರು ನಾವು ಗೆಳೆಯರು' ಚಿತ್ರವನ್ನು ವಿಕ್ರಮ್ ಸೂರಿ ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ ಕಥೆ ಬರೆದು ನಾಗರಾಜ್ ಗೋಪಾಲ್ ರವರು ಬಂಡವಾಳ ಹಾಕಿದ್ದರು. ಅನೂಪ್ ಸೀಳಿನ್ ಸಂಗೀತ ಚಿತ್ರದಲ್ಲಿದೆ. 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಅಚಿಂತ್ಯ, ನಿಹಾಲ್,ಅಮೋಘ್, ಮಹೇಂದ್ರ, ಅಭಿಷೇಕ್, ತುಷಾರ್, ಸೂರಜ್, ಪುಟ್ಟರಾಜು, ತೇಜಸ್ವಿನಿ ಮತ್ತು ಇತರೆ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿಮ್ಮ ಆಯ್ಕೆ ಯಾವುದು..?

ಈ ಎರಡು ಸಿನಿಮಾಗಳಲ್ಲಿ ನಿಮ್ಮ ಆಯ್ಕೆ ಯಾವುದು..? ಈ ಶುಕ್ರವಾರ ನೀವು ಯಾವ ಸಿನಿಮಾ ನೋಡುವುದಕ್ಕೆ ಪ್ಲಾನ್ ಮಾಡಿದ್ದೀರಿ ಎನ್ನುವುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.

English summary
Challenging star Darshan starrer 'Tarak' and 'Eleyaru Naavu Geleyaru' movies are releasing on september 29th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X