'ರಂಗನಾಯಕಿ' ಎದುರು ನಿಂತ 'ದಂಡುಪಾಳ್ಯ' ಗ್ಯಾಂಗ್
ನಾಳೆ (ನವೆಂಬರ್ 1) ಕನ್ನಡ ರಾಜ್ಯೋತ್ಸವ ಈ ವಿಶೇಷವಾಗಿ ಕನ್ನಡದ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ರಂಗನಾಯಕಿ' ಎದುರು 'ದಂಡುಪಾಳ್ಯ' ಗ್ಯಾಂಗ್ ನಿಂತುಕೊಂಡಿದೆ.
ಅದಿತಿ ಪ್ರಭುದೇವ ನಟನೆಯ 'ರಂಗನಾಯಕಿ' ಹಾಗೂ ಸುಮನಾ ರಂಗನಾಥ್ ಅಭಿನಯದ 'ದಂಡುಪಾಳ್ಯಂ 4 ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಈ ಎರಡು ಸಿನಿಮಾಗಳು ನಾಯಕಿ ಪ್ರಧಾನವಾಗಿವೆ.
'ರಂಗನಾಯಕಿ' ಸಿನಿಮಾದ ಪ್ರೀಮಿಯರ್ ಶೋ ಈಗಾಗಲೇ ನಡೆದಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದಿತಿ ಪ್ರಭುದೇವ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ದಯಾಳ್ ಪದ್ಮನಾಭನ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ಇಂಡಿಯನ್ ಪನೋರಮಾಗೆ ಈ ಸಿನಿಮಾ ಆಯ್ಕೆ ಆಗಿತ್ತು.

ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವನ್ನು ಇಟ್ಟುಕೊಂಡು ಕಥೆ ಮಾಡಿದ ದಯಾಳ್, ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಉಳಿದಂತೆ, ಶ್ರೀನಿ ತ್ರಿವಿಕ್ರಮ್ ಹಾಗೂ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ.
ದಂಡುಪಾಳ್ಯಂ 4 ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಸರಣಿಯ ಈ ಹಿಂದಿನ ಚಿತ್ರಗಳಂತೆ ನಾಲ್ಕನೇ ಚಿತ್ರದಲ್ಲೂ ಅದೇ ಭಯಾನಕ, ಕ್ರೂರ, ಹಿಂಸೆ ಎಲ್ಲವೂ ಇದ್ದು, ಸಿನಿಮಾ ಪ್ರೇಕ್ಷಕರಿಗೆ ಭಯ ಹುಟ್ಟಿಸುತ್ತಿದೆ. ವೆಂಕಟ್ ಈ ಚಿತ್ರವನ್ನ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಕೂಡ.

ಜನವರಿ ತಿಂಗಳಲ್ಲಿ ಹಿಂದಿ, ಬೋಜ್ ಪುರಿ, ಮರಾಠಿ, ಛತ್ತೀಸ್ ಗಡ್, ಗುಜರಾತಿ, ಬೆಂಗಾಳಿ ಭಾಷೆಯಗಳಲ್ಲಿ ಏಕಕಾಲದಲ್ಲಿ 1000 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯೋಜನೆ ಸಿದ್ಧಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.


Click it and Unblock the Notifications











