For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಪುಷ್ಪಕ ವಿಮಾನ ಚಿತ್ರ ಪ್ರದರ್ಶನ

  By Rajendra
  |

  ಮೂಕಿ ಕಾಮಿಡಿ ಸಿನಿಮಾ ಪುಷ್ಪಕ ವಿಮಾನ. 1987, ಸೆಪ್ಟೆಂಬರ್ 10ರಂದು ತೆರೆಕಂಡ ಈ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ. ಈ ಚಿತ್ರದ ಪ್ರದರ್ಶನವನ್ನು ಕೆವಿ ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ ಭಾನುವಾರ (ಮಾ.4) ಏರ್ಪಡಿಸಿದೆ.

  ಒಟ್ಟು 131 ನಿಮಿಷಗಳ ಈ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಕೂಡ ಇರಲಿಲ್ಲ. ಆಂಗಿಕ ಅಭಿನಯ, ಕೇವಲ ಸದ್ದು, ದೇಹ ಭಾಷೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದು. ತುಟಿ ಚಲನೆಯ ಮೂಲಕ ಸನ್ನಿವೇಶಗಳನ್ನು ಸಂಭಾಳಿಸಿದ್ದವು. ಛಾಯಾಗ್ರಹಣವೇ ಚಿತ್ರದ ಜೀವಾಳ.

  ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಖ್ಯಾತ ನಟ ಕಮಲ್ ಹಾಸನ್, ಅಮಲಾ, ಮನದೀಪ್ ರಾಯ್, ಟಿನು ಆನಂದ್, ಫರೀದಾ ಜಲಾಲ್, ಪಿ ಎಲ್ ನಾರಾಯಣ, ಕೆ ಎಸ್ ರಮೇಶ್, ಪ್ರತಾಪ್, ಲೋಕ್‌ನಾಥ್ ತಾರಾಗಣದಲ್ಲಿದ್ದರು. ಚಿತ್ರದಲ್ಲಿ ವೈದ್ಯನಾಥನ್ ಅವರ ಸಂಗೀತವಿತ್ತು. ಕನ್ನಡಿಗ ಶ್ರೀನಗರ ಶ್ರೀನಿವಾಸ್ ಚಿತ್ರದ ನಿರ್ಮಾಪಕರು.

  ಚಿತ್ರ ಪ್ರದರ್ಶನ ಸ್ಥಳ: ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, 1ನೇ ಹಂತ, ಕುಮಾರಸ್ವಾಮಿ ಲೇಔಟ್. ಸಮಯ ಮಧ್ಯಾಹ್ನ 3.30. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99641 52999. (ಒನ್‌ಇಂಡಿಯಾ ಕನ್ನಡ)

  English summary
  Pushpaka Vimana film show is organised by KV Subbanna Apta Samooha and Information department is jointly in Bangalore on 4th March. The movie is a 1987 silent black comedy, written and directed by Singeetham Srinivasa Rao. The film is notable for its inventive re-casting of the silent film form. The film was a blockbuster produced by Kannada film producer Shringar Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X