ದರ್ಶನ್ 'ಜಗ್ಗುದಾದಾ' ಆಗಿ ಇಂದಿಗೆ ಎರಡು ವರ್ಷ ಆಯ್ತು
ನಟ ದರ್ಶನ್ ಅವರ ಹಿಟ್ ಸಿನಿಮಾಗಳ ಪೈಕಿ ಒಂದಾಗಿರುವ 'ಜಗ್ಗುದಾದಾ' ಸಿನಿಮಾ ರಿಲೀಸ್ ಆಗಿ ಇಂದಿಗೆ ಎರಡು ವರ್ಷ ಆಗಿದೆ. ಈ ಸಂಭ್ರಮವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
'ಜಗ್ಗುದಾದಾ' ಸಿನಿಮಾದ ವಿಶೇಷವಾದ ಪೋಸ್ಟರ್ ಗಳನ್ನು ಹಾಕಿ ಡಿ ಬಾಸ್ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಇನ್ನು 'ಜಗ್ಗುದಾದಾ' ಸಿನಿಮಾ ಜೂನ್ 10, 2016 ರಂದು ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಹಿಟ್ ಆದ ಬಳಿಕ ಹಿಂದಿಗೆ ಸಹ ಈ ಚಿತ್ರ ಡಬ್ ಆಗಿತ್ತು. ರಾಘವೇಂದ್ರ ಹೆಗ್ಡೆ ಈ ಚಿತ್ರವನ್ನು ನಿರ್ದೇಶನ ಮಾಡಿ, ನಿರ್ಮಾಣ ಸಹ ಮಾಡಿದ್ದರು.
ದರ್ಶನ್ ಗೆ ಜೋಡಿಯಾಗಿ ನಟಿ ದೀಕ್ಷಾ ಸೇಠ್ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾವಾಗಿತ್ತು. ಜೊತೆಗೆ ಅನಂತ್ ನಾಗ್ ಹಾಗೂ ರವಿಶಂಕರ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ದರ್ಶನ್ ಹಾಗೂ ಸೃಜನ್ ಜೋಡಿ ಈ ಚಿತ್ರದಲ್ಲಿಯೂ ಮುಂದುವರೆದಿತ್ತು. ಹರಿಕೃಷ್ಣ ಸಂಗೀತದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು.

ಇವುಗಳ ಜೊತೆಗೆ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ 'ಜಗ್ಗುದಾದಾ' ಅತ್ಯುತ್ತಮ ಕಮರ್ಶಿಯಲ್ ಸಿನಿಮಾವಾಗಿ ಹೊರಹೊಮ್ಮಿತು. ಸ್ವತಃ ನಟ ದರ್ಶನ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.


Click it and Unblock the Notifications











