»   » ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ

ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ

Subscribe to Filmibeat Kannada
KFCC president Dr. Jayamala
ಬೆಂಗಳೂರು, ಡಿ. 20 : ಎಪ್ಪತ್ತೈದು ಸಂವತ್ಸರಗಳನ್ನು ಕಂಡ ಕನ್ನಡ ಚಲನಚಿತ್ರೋದ್ಯಮದ ಸವಿನೆನಪಿಗಾಗಿ ನಾಳೆ ಭಾನುವಾರ (ಡಿ. 21) ಬೆಂಗಳೂರಿನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಈ ಸಂಕಿರಣವನ್ನು ಸುಚಿತ್ರ ಫಿಲಂ ಸೊಸೈಟಿಯು ರಾಜ್ಯ ಸರಕಾರ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಕಮಿಟಿ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಅಮೃತ ಮಹೋತ್ಸವ ನಿಮಿತ್ತದ ಈ ಸಂಕಿರಣವು ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿರುವ ಕೆಎಚ್ ಪಾಟೀಲ್ ಸಭಾಂಗಣದಲ್ಲಿ ನಡೆಯಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಸಂಕಿರಣವನ್ನು ಉದ್ಘಾಟಿಸುವರು. ಹಿರಿಯ ಚಿತ್ರಕರ್ಮಿ ಕೆಸಿಎನ್ ಚಂದ್ರಶೇಖರ್ ಆಶಯ ಭಾಷಣ ಮಾಡುವರು.

ಕಾರ್ಯಕ್ರಮ ಪಟ್ಟಿಯಲ್ಲಿ ಇವತ್ತಿನ ಸಿನಿಮಾ, ಸಿನಿಮಾ ಸಂಗೀತ, ಚಿತ್ರಗಳ ಸಾಂಸ್ಕೃತಿಕ ಹಿನ್ನೆಲೆ ಮತ್ತು ಚಲನಚಿತ್ರ ತಂತ್ರಜ್ಞಾನ ಕುರಿತ ಉಪನ್ಯಾಸಗಳಿವೆ. ಹೆಚ್ಚಿನ ವಿವರಗಳಿಗೆ : ಸುಚಿತ್ರ, 36, 9 ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು, 560 070 ದೂರವಾಣಿ: 2671 1785 / 2664 6517.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada