ದರ್ಶನ್ ಕನ್ನಡದ ಸಂಜಯ್ ದತ್ ಆಗಬಹುದೇ?

ಬಹುಶಃ ವಿಷಯ ಈ ಮಟ್ಟಕ್ಕೆ ಹೋಗುತ್ತೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ತಿಳಿಯದೇ ಇದ್ದಿರಬಹುದು. ಇದಕ್ಕೆ ಕೊಡಬಹುದಾದ ಉದಾಹರಣೆ ಏನೆಂದರೆ ಪೋಲೀಸ್ ಸ್ಟೇಷನ್‌ನಲ್ಲಿ ತಾನು ಕೊಟ್ಟ ಮೂಲ ದೂರಿಗೆ ವಿರುದ್ಧವಾಗಿ ವಿಜಯಲಕ್ಷ್ಮಿ ನೀಡುತ್ತಿರುವ ಹೇಳಿಕೆ. ಪತ್ನಿಗೆ ಹೊಡೆದಿರೋದನ್ನು ಒಪ್ಪಿಕೊಳ್ಳುವ ದರ್ಶನ್ ಮದ್ಯದ ಅಮಲಿನಲ್ಲಿ ಈ ರೀತಿ ಅನಾಗರಿಕರಾಗಿ ನಡೆದು ಕೊಂಡಿರಬಹುದು. ಆದರೆ ಈ ಘಟನೆಯಿಂದ ಮಾನಸಿಕವಾಗಿ ಇಬ್ಬರೂ ಜರ್ಜರಿತರಾಗಿಲ್ಲವೇ?
ಸ್ಕ್ರೀನ್ ಮೇಲೆ ರೌಡಿಗಳ ತಲೆ ಚೆಂಡಾಡುವ ದರ್ಶನ್ ಆಸ್ಪತ್ರೆಯಲ್ಲಿ ಕಾಯಿಲೆಯಿಂದ ಮತ್ತು ನಿದ್ರಾವಸ್ಥೆಯಲ್ಲಿ ಇರೋದನ್ನು ನೋಡಿ ಅವರ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ. ಇನ್ನು ಆತನ ಪತ್ನಿಗೆ ಆಗದೆ ಇರುತ್ತಾ? ಪತಿಯೇ ದೈವ, ಪತಿ ರಕ್ಷಣೆಯೇ ಪತ್ನಿ ಧರ್ಮ ಎಂದು ಇನ್ನೂ ನಂಬುವ "ಪುರುಷ ಪ್ರಧಾನ" ಸಮಾಜದಲ್ಲಿ ಪತಿ ವಿರುದ್ಧ ದೂರು ನೀಡಿ ಪತ್ನಿ ತಪ್ಪು ಮಾಡಿದಳು ಎಂದು ನಂಬುವ ಜನ ಇಲ್ಲದಿಲ್ಲ. ಏಕೆಂದರೆ ದರ್ಶನ್ ಒಬ್ಬ ನಟ ಮತ್ತು ಆತನಿಗೆ ವಿವಿಧ ವರ್ಗಗಳಲ್ಲಿರುವ ಅಪಾರ ಅಭಿಮಾನಿಗಳು.
More from Filmibeat
English summary
Challenging Star Kannada actor Darshan's acts of violence against his wife has once again highlighted the ugly side of the entertainment industry. The Darshan-Vijaylakshmi-Nikita saga seems to have a new twist to the tale everyday. Should Darshan become Kannada film industries Sanjay Dutt?


Click it and Unblock the Notifications











