For Quick Alerts
  ALLOW NOTIFICATIONS  
  For Daily Alerts

  ಸುದೀಪರ'ವೀರ ಮದಕರಿ' ,ಥ್ರಿಲ್ಲರ್ ಗೆ 350

  By Staff
  |

  ಮತ್ತೇರಿದ ಆನೆಯ ಮದವಡಗಿಸಿದ ಧೀಮಂತ ರಾಜ ಆ ಮದಕರಿ. ಚಾಣಕ್ಷತನದಿಂದಲೇ ಯಂತಹವರನ್ನು ಯಾಮಾರಿಸುತ್ತಾನೆ ಈ ಮದಕರಿ. ಮೊನ್ನೆ ಹೀಗೆ ದಿನೇಶ್‌ಗಾಂಧಿ ಸೂಟ್ಕೇಸ್ ಹಿಡಿದು ಹೋಗುತ್ತಿರುವುದನ್ನು ಹಿಂಬಾಲಿಸಿದ ಸುದೀಪ್ ಹಾಗೂ ಟೆನ್ನಿಸ್‌ಕೃಷ್ಣ ಜೋಡಿ, ಗಾಂಧಿ ಅವರ ಸೂಟ್ಕೇಸ್ ಅಪಹರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರನ್ನು ಹಿಮ್ಮೆಟಿದ ಗಾಂಧಿ ಅಪಘಾತಕ್ಕಿಡಾಗುತ್ತಾರೆ. ಇದನ್ನು ಗಮನಿಸಿದ ಸುದೀಪ್, ಟೆನ್ನಿಸ್‌ಕೃಷ್ಣ ಜೋಡಿ ಗಾಂಧಿಯನ್ನು ಆಸ್ಪತ್ರೆಗೆ ದಾಖಲಿಸಿ ಅವರ ಮೈಮೇಲಿದ ಆಭರಣಗಳಿಂದಲೇ ಆಸ್ಪತ್ರೆಯ ಖರ್ಚನ್ನು ಪಾವತಿಸಿ ಅಲ್ಲಿಂದ ಕಂಬಿಕೀಳುತ್ತಾರೆ. ಬನಶಂಕರಿ ಬಿಗ್‌ಬಜಾರಿನ ಬಳಿ ಚಿತ್ರೀಕೃತವಾದ ಈ ರೋಚಕ ಛೇಸಿಂಗ್ ಸನ್ನಿವೇಶಕ್ಕೆ ಥ್ರಿಲ್ಲರ್‌ಮಂಜು ಅವರ ಸಾರಥ್ಯವಿತ್ತು. ವೀರ ಮದಕರಿ ಮಂಜು ಅವರು ಸಾಹಸ ಸಂಯೋಜಿಸುತ್ತಿರುವ350ನೇ ಚಿತ್ರ.

  ದಿನೇಶ್‌ಗಾಂಧಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸುತ್ತಿದ್ದಾರೆ. ಮೈಆಟೋಗ್ರಾಫ್ ಹಾಗೂ ನಂ73ಶಾಂತಿನಿವಾಸ ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಸುದೀಪ್‌ಗೆ ಇದು ಮೂರನೇ ಚಿತ್ರ. ಕೀರವಾಣಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ವಿಜಯೇಂದ್ರಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಬಿ.ಎಸ್.ಕೆಂಪರಾಜ್ ಸಂಕಲನ, ಸುರೇಶ್‌ರಾಜ್ ಸಹನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿದೆ.

  ಈ ಚಿತ್ರದ ತಾರಾಬಳಗದಲ್ಲಿ ಸುದೀಪ್, ದಿನೇಶ್‌ಗಾಂಧಿ, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಮುಂತಾದವರಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಬಾದಾಮಿ ಪಟ್ಟದಕಲ್ಲಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣವಾಗುತ್ತಿರುವುದು ವೀರ ಮದಕರಿಯ ವಿಶೇಷ.

  (ದಟ್ಸ್ ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X