ರಾಧಿಕಾ ಅವರ ತಂದೆ ಹೇಳಿದ ಬ್ಯುಸಿನೆಸ್ ಸೀಕ್ರೆಟ್!

ಉಪೇಂದ್ರ, ಸುದೀಪ್, ದರ್ಶನ್ ಮೊದಲಾದವರಾದರೆ ಪರ್ವಾಗಿರಲಿಲ್ಲ. ರಾಧಿಕಾಗೆ ಈಗ ಇಪ್ಪತ್ತು ತುಂಬಿತು ಅಷ್ಟೇ. ಈಗಲೇ ಮುದುಕರೊಂದಿಗೆ ನಟಿಸಲು ಒಪ್ಪಿಕೊಂಡರೆ ನಮ್ಮ ಪಾಡೇನು ನೀವೇ ಹೇಳಿ...? ಎಂದು ಹೇಳುತ್ತಾ 'ಥೂ' ಎಂದರು ದೇವರಾಜ್. 'ಛೀ' ಎಂದಿತು ಪಕ್ಕವಾದ್ಯ.
"ಮಗಳ ಸಂಪಾದನೆಯನ್ನು ಬಿಟ್ಟು ನೀವು ಬೇರೇನಾದರೂ ವ್ಯವಹಾರ ಮಾಡಿಕೊಂಡಿದ್ದೀರಾ?" ಎಂಬರ್ಥದ ಪ್ರಶ್ನೆಯನ್ನು ದೇವರಾಜ್‌ಗೆ ಕೇಳಿದಾಗ ಅದರೊಳಗಿನ ವ್ಯಂಗ್ಯ ಅವರಿಗರ್ಥವಾಗಲಿಲ್ಲ. ಅವರು ಹೆಮ್ಮೆಯಿಂದಲೇ ಉತ್ತರಿಸಿದರು: "ಒಂದು ಹೋಟೆಲು ಮಾಡಬೇಕೆಂದುಕೊಂಡಿದ್ದೇನೆ.
ಅದು ರಾಧಿಕಾ ತಂದೆಯ ಹೋಟೆಲು ಅಂದಾಗ ಜನರ ನಿರೀಕ್ಷೆ ಸಹಜ. ಹೀಗಾಗಿ ಚಿಕ್ಕಪುಟ್ಟ ಹೋಟೆಲು ಮಾಡಲು ಮನಸ್ಸಿಲ್ಲ. ಪಾಶ್ ಆಗಿರಬೇಕು; ಲುಕ್ ಇರಬೇಕು. ಖರ್ಚು ದೊಡ್ಡದಿದೆ. ಈಗ ಕೈಯಲ್ಲಿ ದುಡ್ಡಿಲ್ಲ. ಇದ್ದುದರಲ್ಲಿ ಎರಡು ಕಾರು ಕೊಂಡೆವು. ಹದಿಮೂರು ಸಾವಿರ ರೂಪಾಯಿ ಬಾಡಿಗೆಗೆ ಮನೆ ಮಾಡಿಕೊಂಡೆವು. ಅಂತಸ್ತಿಗೆ ತಕ್ಕ ಹಾಗೆ ಬದುಕ ಬೇಡವೇ?"
English summary
Kannada film journalist Ganesh Kasaragodu's write up on Kannada actress Radhika Kumaraswamy! The same artical published in his book "Off The Record". All about Radhika and Kumaraswamy relationship and more.


Click it and Unblock the Notifications