ಶ್ರೀವಲ್ಸನ್ ಕೈಹಿಡಿದ ಕನ್ಯಾ ಕುಮಾರಿ ಶ್ವೇತಾ ಮೆನನ್

By Rajendra

ದಕ್ಷಿಣ ಭಾರತದ ಖ್ಯಾತ ತಾರೆ ಶ್ವೇತಾ ಮೆನನ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಕೇರಳದ ವಾಲನ್ ಚೆರ್ರಿ ಜಿಲ್ಲೆಯ ದೇವಸ್ಥಾನದಲ್ಲಿ ಶ್ವೇತಾ ಅವರು ಶ್ರೀವಲ್ಸನ್ ಮೆನನ್ ಅವರ ಕೈಹಿಡಿದರು.ಮೂಲತಃ ತ್ರಿಶೂರ್‌ನವರಾದ ಶ್ರೀವಲ್ಸನ್ ಮೆನನ್ ಉದ್ಯೋಗ ನಿಮಿತ್ತ ಮುಂಬೈನಲ್ಲಿ ನೆಲೆಗೊಂಡಿದ್ದಾರೆ.

ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆದ ಸರಳ ವಿವಾಹಕ್ಕೆ ಬಂಧು ಮಿತ್ರರು ಶುಭ ಕೋರಿದರು. ಹಿಂದಿ, ತಮಿಳು,ತೆಲುಗು ಹಾಗೂ ಮಲಯಾಳಂ ಸೇರಿದಂತೆ ಕನ್ನಡದ ಚಿತ್ರದಲ್ಲೂ ಶ್ವೇತಾ ಮೆನನ್ ಅಭಿನಯಿಸಿದ್ದಾರೆ. ಶಿವಮಣಿ ನಿರ್ದೇಶನದ ಕನ್ನಡದ 'ಓಂಕಾರ' ಚಿತ್ರದಲ್ಲಿ ಶ್ವೇತಾ ಮೆನನ್ ಅಭಿನಯಿಸಿದ್ದರು.

ತೂ ಬಾಲ್ ಬ್ರಹ್ಮಚಾರಿ ಮೈ ಹೂ ಕನ್ಯಾಕುಮಾರಿ, ಇಷ್ಕ್, ಅಶೋಕ, ಬಂಧನ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲೂ ಶ್ವೇತಾ ಮೆನನ್ ಅಭಿನಯಿಸಿದ್ದಾರೆ. ಮೂಲತಃ ರೂಪದರ್ಶಿಯಾಗಿದ್ದ ಶ್ವೇತಾ ಮೆನನ್ ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. (ಪಿಟಿಐ)

More from Filmibeat

English summary
Popular Malayalam actress Swetha Menon today got married at a temple in Valancherry in the district.The bridegroom Sreevalsan Menon, a native of Thrissur and working in Mumbai, tied the nuptial knot at the Neythalappurath Sastha Ayappa temple before relatives and friends
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X