For Quick Alerts
  ALLOW NOTIFICATIONS  
  For Daily Alerts

  ನಟಿ ತಾರಾ ಹೆಸರಿನ ಜೊತೆ ಈಗ ಪತಿಯ ಹೆಸರಿಲ್ಲ

  By Rajendra
  |

  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೆಸರಿನಲ್ಲಿ ಭಾರಿ ಬದಲಾವಣೆಯೇನೂ ಇಲ್ಲ. ಅವರ ಮೂಲ ಹೆಸರು ತಾರಾ ಅನುರಾಧಾ. ಚಿತ್ರರಂಗಕ್ಕೆ ಬಂದ ಬಳಿಕ ಅವರನ್ನು ಎಲ್ಲರೂ ಶಾರ್ಟ್ ಅಂಡ್ ಸ್ವೀಟ್ ಆಗಿ ತಾರಾ ಎಂದು ಕರೆಯುತ್ತಿದ್ದರು.

  ಬಳಿಕ ಛಾಯಾಗ್ರಾಹಕ ವೇಣು ಅವರ ಕೈಹಿಡಿದ ಮೇಲೆ ಅವರ ಹೆಸರು ತಾರಾ ಅನುರಾಧಾ ವೇಣು ಎಂದಾಯಿತು. ಶಾಲಾ ದಾಖಲೆಗಳಲ್ಲಿ ಎಲ್ಲಾ ಕಡೆ ಅವರ ಹೆಸರು ತಾರಾ ಅನುರಾಧಾ ಎಂದೇ ನಮೂದಾಗಿದೆ. ಈಗ ಹೆಸರು ಉದ್ದವಾದ ಕಾರಣ ತಾರಾ ಅನುರಾಧಾ ಎಂದು ಬದಲಾಯಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

  ಆದರೆ ತಮ್ಮ ಹೆಸರಿನ ಬದಲಾವಣೆಗೆ ಯಾವುದೇ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಕವಡೆಶಾಸ್ತ್ರದ ಉದ್ದೇಶವಿಲ್ಲ ಎಂದಿದ್ದಾರೆ ತಾರಾ. ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಅಕಾಡೆಮಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮವನ್ನು ಈ ಬಾರಿ ಬೆಂಗಳೂರಿಗೆ ಬದಲಾಗಿ ಮೈಸೂರಿನಲ್ಲಿ ನಡೆಸುವುದಾಗಿ ತಿಳಿಸಿದರು. (ಒನ್‌ಇಂಡಿಯಾ ಕನ್ನಡ)

  English summary
  Karnataka Chalanachitra Academy president cum actress Tara has changed her name as Tara Anuradha. She is better known by his screen name Tara. After she married best cinematographer H.C. Venu in 2005, her name became Tara Anuradha Venu. Now she shorten her name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X