ಖಡಕ್ ಅಗ್ನಿ ಶ್ರೀಧರ್ ಮತ್ತೆ ಎದೆಗಾರಿಕೆಯೊಂದಿಗೆ ಹಾಜರ್

Adithya Shivarajkumar
ಖ್ಯಾತ ಪತ್ರಕರ್ತ, ಕಥೆಗಾರ, ನಿರ್ದೇಶಕ ಅಗ್ನಿ ಶ್ರೀಧರ್ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾರೆ. 'ಆ ದಿನಗಳು' ಸಿನಿಮಾ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಅಗ್ನಿ ಶ್ರೀಧರ್ ಇದೀಗ ಮತ್ತೆ ಎದೆಗಾರಿಕೆ ತೋರಲು ಹೊರಟಿದ್ದಾರೆ. ಈಗ ಅವರು ತಮ್ಮ ಕಥೆ 'ಎದೆಗಾರಿಕೆ' ಯನ್ನು ಅದೇ ಹೆಸರಿನ ಸಿನಿಮಾ ಮಾಡಲು ಹೊರಟಿದ್ದಾರೆ. ಇಂದು (20-10-2011) ಮುಹೂರ್ತ ನಡೆದಿದೆ.

ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'ಯನ್ನು ನಿರ್ದೇಶಿಸಲಿದ್ದಾರೆ ಡಿ. ಸುಮನಾ ಕಿತ್ತೂರ್. ಈ ಮೊದಲು ಅವರು ದುನಿಯಾ ವಿಜಯ್ ನಾಯಕತ್ವದಲ್ಲಿ 'ಸ್ಲಂ ಬಾಲಾ' ನಿರ್ದೇಶಿಸಿದ್ದರು. ಇದೀಗ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮಗ 'ಡೆಡ್ಲಿ' ಖ್ಯಾತಿಯ ಆದಿತ್ಯ ಈ ಎದೆಗಾರಿಕೆ ಚಿತ್ರಕ್ಕೆ ನಾಯಕ. ನಾಯಕನ ಸಖಿಯಾಗಿ 'ಚಂದ್ರಮುಖಿ ಪ್ರಾಣಸಖಿ' ಭಾವನಾ ಆಯ್ಕೆಯಾಗಿದ್ದಾರೆ.

'ಮೇಘ ಮೂವೀಸ್' ಲಾಂಛನದಲ್ಲಿ ತಯಾರಿಸಲಾಗುವ ಎದೆಗಾರಿಕೆಗೆ ಕಥೆ-ಸಂಭಾಷಣೆ ಅಗ್ನಿ ಶ್ರೀಧರ್ ಅವರದು. ಚಿತ್ರಕಥೆಗೆ ಇವರೊಂದಿಗೆ ಪೆನ್ನು ಹಿಡಿದಿದ್ದಾರೆ ಸುಮನಾ ಕಿತ್ತೂರ್. ಅಮಾನುಲ್ಲಾ ಬಚ್ಚನ್ ಹಾಗೂ ಎಂ ಎಸ್ ರವೀಂದ್ರ ಈ ಚಿತ್ರಕ್ಕೆ ನಿರ್ಮಾಪಕರು. ದೀಪಕ್ ಪಂಡಿತ್ ಸಂಗೀತ ಹಾಗೂ ಆಂಟನಿ ಎಲ್ ರೂಬೆನ್ ಸಂಕಲನವಿದೆ. ಬಿ. ರಾಕೇಶ್ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ.

ಸಹಜವಾಗಿಯೇ ಈ ಚಿತ್ರ ಸಾಕಷ್ಟು ಸಂಚಲನ ಮೂಡಿಸಿದೆ. ಕಾರಣ ಅಗ್ನಿ ಶ್ರೀಧರ್ ಈ ಮೊದಲು ಸ್ಯಾಂಡಲ್ ವುಡ್ ಗೆ ಕೊಟ್ಟ ಯಶಸ್ವೀ ಕಾಣಿಕೆ "ಆ ದಿನಗಳು" ಚಿತ್ರ. ಚೈತನ್ಯ ನಿರ್ದೇಶನದ ಆ ದಿನಗಳು, ಅಗ್ನಿ ಶ್ರೀಧರ್ ಅವರ ಹರಿತವಾದ ಸಂಭಾಷಣೆ ಹಾಗೂ ಬಿಗಿಯಾದ ಚಿತ್ರಕಥೆಯಿಂದ ಜನರಿಗೆ ಮರೆಯಲಾಗದ ಮೋಡಿ ಮಾಡಿತ್ತು. ಈಗ ಎದೆಗಾರಿಕೆ ಇನ್ನೂ ಹೆಚ್ಚಿನ ನಿರೀಕ್ಷೆ ಮೂಡಿಸಿದೆ, ನಿರಾಶೆ ಆಗಲಾರದು ಖಂಡಿತ...

More from Filmibeat

English summary
Famous journalist, Director Agni Sridhar story Edegarike becomes now movie. D. Sumana Kithur directs this for Agni Sridhar Story and Dialogues. Sumana Kithur asociated with agni sridhar for Screenplay of this movie. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X