ಕನ್ನಡ, ತಮಿಳಿನಲ್ಲಿ ಏಕಕಾಲಕ್ಕೆ ಪೊಲೀಸ್ ಕ್ವಾಟ್ರಸ್
ಕನ್ನಡ ಚಿತ್ರರಂಗಕ್ಕೆ 'ಸೈನೈಡ್" ಎಂಬ ಉತ್ತಮ ಚಿತ್ರ ಕೊಟ್ಟ ನಿರ್ದೇಶಕ ಎ.ಎಂ.ಆರ್.ರಮೇಶ್ ನಿರ್ದೇಶನದ ಮತ್ತೊಂದು ಚಿತ್ರ 'ಪೊಲೀಸ್ ಕ್ವಾಟ್ರಸ್". ಪ್ರಸ್ತುತ ಚಿತ್ರಕ್ಕೆ ಅಶ್ವಿನಿ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ವಿಭಿನ್ನ ಪ್ರೇಮಕಥೆಯಿಂದ ಕೂಡಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಈ ಚಿತ್ರ 'ಪೊಲೀಸ್ ಕ್ವಾಟ್ರಸ್" ಆದರೆ, ತಮಿಳಿನಲ್ಲಿ 'ಕಾವಲರ್ ಕುಡಿಯಿರುಪ್ಪು" ಎಂಬ ಶೀರ್ಷಿಕೆಯಿಂದ ಹೊರಹೊಮ್ಮುತ್ತಿದೆ.
ವಸಿಷ್ಠ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ದೇಶಕರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ದ್ವಾರಕನಾಥ್ ಕ್ಯಾಮೆರಾ, ಆಂಟೋನಿ ಸಂಕಲನ, ಜೇಮ್ಸ್ ವಸಂತನ್ ಸಂಗೀತ, ತವಸಿರಾಜ್ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಅನೀಷ್, ಸೋನು, ಅವಿನಾಶ್, ಶರಣ್ಯ, ದಿಲೀಪ್‌ರಾಜ್, ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











