»   »  ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!

ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!

Subscribe to Filmibeat Kannada
Astrologer foresee disaster in ganesh's future
ಗೋಲ್ಡನ್ ಸ್ಟಾರ್ ಗಣೇಶ್ ಗೆ ಭಯಂಕರ ಗಂಡಾಂತರ ಕಾದಿದೆಯೇ? ಹೌದೆನ್ನುತ್ತಾರೆ ಮಾಗಡಿ ರಸ್ತೆಯ ದಾಸರಹಳ್ಳಿಯ ಖ್ಯಾತ ಜ್ಯೋತಿಷಿಯೊಬ್ಬರು. ಗಣೇಶ್ ಅವರ ವೃತ್ತಿ ಬದುಕಿನ ಏಳುಬೀಳುಗಳನ್ನು ಕರಾರುವಕ್ಕಾಗಿ ಹೇಳುತ್ತಿರುವ ಈ ಜ್ಯೋತಿಷಿ ಬಳಿ ಹೋಗಿ ಗಣೇಶ್ ಈ ಹಿಂದೆ ತಮ್ಮ ಭವಿಷ್ಯವನ್ನು ಕೇಳಿಕೊಂಡಿದ್ದರಂತೆ. ಅದು ನಿಜವೂ ಆಗಿದೆ.

ಅದ್ಭುತವಾದ ಚಿತ್ರವೊಂದರ ನಂತರ ಕನ್ನಡ ಚಿತ್ರರಂಗ ಕಂಡರಿಯದ ಎತ್ತರಕ್ಕೆ ಗಣೇಶ್ ಬೆಳೆಯುತ್ತಾರೆ ಎಂದು ಭವಿಷ್ಯ ನುಡಿದ ಖ್ಯಾತಿ ಈ ಜ್ಯೋತಿಷಿಯವರದ್ದು. ಮತ್ತೆ ಅದೇ ಗಣೇಶ್ ಬಗ್ಗೆ ಅದೇ ಜ್ಯೋತಿಷಿ ಹೇಳಿರುವುದಿಷ್ಟು...''ಮದುವೆಯ ನಂತರ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾನೆ ಎಂದಿದ್ದೆ. ಅದು ನಿಜವಾಗಿದೆ''.

''ಮಗು ಹುಟ್ಟಿದ ನಂತರ ವೃತ್ತಿ ಬದುಕಿನಲ್ಲಿ ಮತ್ತೆ ಸೋಲು ಕಾಣುವ ದುರಂತ ನಡೆಯುತ್ತದೆ. ತೀರಾ ಎಚ್ಚರಿಕೆಯಿಂದಿರದಿದ್ದರೆ ಜೀವಕ್ಕೆ ಅಪಾಯವೂ ಇದೆ. ಅಪಘಾತದ ಸೂಚನೆಯನ್ನು ಈಗಾಗಲೇ ಹೇಳುವುದಕ್ಕಾಗದಿದ್ದರೂ ಆ ಬಗ್ಗೆ ವಿಧಿಯನ್ನು ದೂಷಿಸುವುದಕ್ಕಾಗುವುದಿಲ್ಲ. ಗಣೇಶ್ ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕು.'' ಎಂದು ಜ್ಯೋತಿಷಿ ಎಚ್ಚರಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಮೋನಿಷಾ ಎಂಬ ತಬ್ಬಲಿಯ ಪ್ರಾಣಪಕ್ಷಿ ಹಾರಿತು
ಗೋಲ್ಡನ್ ಸ್ಟಾರ್ ಗಣೇಶ್ ಹೆತ್ತವರ ಗೋಳಿನ ಕಥೆ
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!
ಥಂಡ ಮತ್ಲಬ್ ಕೋಕಾ ಕೋಲದಲ್ಲಿ ಗಣೇಶ್
ಲವರ್ ಬಾಯ್ ಪಾತ್ರಗಳಿಗೆ ಗಣೇಶ್ ವಿದಾಯ!
ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada