ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿ.15ಕ್ಕೆ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೇಲ್ವಿಚಾರಣೆಯಲ್ಲಿ ಅಡಿಯಲ್ಲಿ 13 ಕಮಿಟಿಗಳು ಈ ಹಬ್ಬವನ್ನು ಯಶಸ್ವಿಗೊಳಿಸಲು ಕಾರ್ಯನಿರ್ವಹಿಸಲಿವೆ. ಇದಕ್ಕೆ ಕಲಾತ್ಮಕ ನಿರ್ದೇಶಕರಾಗಿ ಖ್ಯಾತ ಚಲನಚಿತ್ರ ತಜ್ಞ ಹಾಗೂ ಬೆಂಗಳೂರು ಸುಚಿತ್ರ ಫಿಲಂ ಸೊಸಾಯ್ಟಿ ಅಧ್ಯಕ್ಷರಾಗಿರುವ ಎಚ್ ಎನ್ ನರಹರಿ ಆಯ್ಕೆಯಾಗಿದ್ದಾರೆ.
ವಿಶ್ವದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಮೊತ್ತವನ್ನು ಈ ಪ್ರಶಸ್ತಿ ಒಳಗೊಂಡಿದೆ. ಪ್ರಸಿದ್ಧ ಇರಾನಿಯನ್ ಸಿನಿಮಾ ನಿರ್ದೇಶಕ ಮೆಹರ್ಜುಯ್ ಹಾಗೂ ದಾದಾಸಾಹೇಬ್ ಪ್ರಶಸ್ತಿ ವಿಜೇತ ತಮಿಳು ನಿರ್ದೆಶಕ ಬಾಲಚಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ ಸುಮಾರು 180 ಸಿನಿಮಾಗಳು ಸ್ಪರ್ಧಿಸುವ ನಿರೀಕ್ಷೆ ಇದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಸಿನಿಮಾಗಳು ಲಿಡೋ, ಐನಾಕ್ಸ್-ಜಯನಗರ, ಜಿಎಮ್ ರಿಜಾಯ್ಸ್, ಬಾದಾಮಿ ಹೌಸ್, ಸುಚಿತ್ರ ಫಿಲಂ ಸೊಸಾಯ್ಟಿ ಇವುಗಳಲ್ಲಿ ಪ್ರದರ್ಶನವಾಗಲಿವೆ. ಈ ಚಿತ್ರೋತ್ಸವದ 7 ದಿನಗಳ ಪಾಸ್ ದರವನ್ನು ಸಾರ್ವಜನಿಕರಿಗೆ ರು. 500, ಚಿತ್ರರಂಗದವರಿಗೆ ರು. 200 ಹಾಗೂ ವಿದ್ಯಾರ್ಥಿಗಳಿಗೆ ರು. 100 ಎಂದು ನಿಗದಿಪಡಿಸಲಾಗಿದೆ.


Click it and Unblock the Notifications











