»   » ದ್ವಿಪಾತ್ರದಲ್ಲಿ ಉಪೇಂದ್ರ ಅಕ್ಕಪಕ್ಕ ರಮ್ಯಾ ಪಾರ್ವತಿ!

ದ್ವಿಪಾತ್ರದಲ್ಲಿ ಉಪೇಂದ್ರ ಅಕ್ಕಪಕ್ಕ ರಮ್ಯಾ ಪಾರ್ವತಿ!

Subscribe to Filmibeat Kannada

ಸೂಪರ್‌ಸ್ಟಾರ್ ಉಪೇಂದ್ರ ದ್ವಿಪಾತ್ರಾಭಿನಯದಲ್ಲಿ ನಟಿಸಿರುವ, ಬಹುಕೋಟಿ ರೂ. ಬಂಡವಾಳದಲ್ಲಿ ನಿರ್ಮಿಸುತ್ತಿರುವ'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರ ಗ್ರಾಫಿಕ್ಸ್ ಸಿಂಗಾರಕ್ಕಾಗಿ ನ್ಯೂಯಾರ್ಕ್‌ಗೆ ತೆರಳಿದೆ. ಚಿತ್ರದಲ್ಲಿನ ಇಬ್ಬರು ನಾಯಕಿಯರ(ಪಾರ್ವತಿ ಮಿಲ್ಟನ್ ಹಾಗೂ ರಮ್ಯಾ ) ಮುದ್ದಿನನಾಯಕನಾಗಿ ಉಪೇಂದ್ರ ಕಾಣಿಸಲಿದ್ದಾರೆ. ಚಿತ್ರದಲ್ಲಿ 20 ನಿಮಿಷಗಳ ಕಾಲಾವಧಿಯ ಗ್ರಾಫಿಕ್ಸ್ ಕೆಲಸಕ್ಕೆ 2.65 ಕೋಟಿ ರೂ. ಖರ್ಚು ಮಾಡಿರುವುದಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳುತ್ತಾರೆ.

ಕನ್ನಡ ಚಿತ್ರರಂಗದಲ್ಲೇ 20 ನಿಮಿಷದ ಗ್ರಾಫಿಕ್ಸ್ ಕೆಲಸಕ್ಕಾಗಿ ಇಷ್ಟೊಂದು ಖರ್ಚು ಮಾಡುತ್ತಿರುವ ಚಿತ್ರ ಮತ್ತೊಂದು ಸಿಗಲಿಕ್ಕಿಲ್ಲ ಎನ್ನುತ್ತಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ವೆಂಕಟೇಶ್ ದತ್ ಅವರೊಂದಿಗೆ ಇತ್ತೀಚೆಗಷ್ಟೆ ನ್ಯೂಯಾರ್ಕ್‌ನಿಂದ ಹಿಂದಿರುಗಿದ ಎಸ್.ವಿ.ರಾಜೇಂದ್ರಸಿಂಗ್ ಬಾಬು!

ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ 15 ದಿನಗಳ ಕಾಲ ಭೀಮೂಸ್ ಕ್ಲೈಮ್ಯಾಕ್ಸ್ ಚಿತ್ರೀಕರಿಸಲಾಗಿದೆ. ಇದಕ್ಕಾಗಿ ಅದ್ಭುತ ಸೆಟ್ ಹಾಕಲಾಗಿತ್ತು. ಇನ್ನ್ನು ಕ್ಯಾಮೆರಾ ಹಿಂದೆ ಆರ್.ಗಿರಿ ಇದ್ದಾರೆ. ಪ್ರಹ್ಲಾದ್ ಅವರೊಂದಿಗೆ ಮುಂಬೈನ ರಾಬಿನ್ ಹುಡ್ ಕೈಜೋಡಿಸಿ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಅಚ್ಚುಕಟ್ಟಾಗಿ ಸಂಭಾಷಣೆ ಬರೆದಿದ್ದಾರೆ ಎಂ.ಎಸ್.ರಮೇಶ್. ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್ ಅದ್ಭುತ ಸಾಹಸ ಮೆರೆದಿದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.

ದೊಡ್ಡಣ್ಣ, ರಾಜೇಶ್, ಗಿರಿಜಾ ಲೋಕೇಶ್, ಪ್ರತಾಪ್, ಸುನಿಲ್, ನಂದ ಕಿಶೋರ್, ಮಂಗಳೂರು ಸುರೇಶ್, ಹರಿಣಿ, ಮಾಸ್ಟರ್ ರಾಹುಲ್, ಮಾಸ್ಟರ್ ವಿಷ್ಣು, ಮಾಸ್ಟರ್ ನಯನ್‌ಶೇಖರ್, ಮಾಸ್ಟರ್ ಮಾರಾ, ಬೇಬಿ ಪೂಜಾ, ಬೇಬಿ ಶಾರದ, ಮಾಸ್ಟರ್ ಚಾಂಗ್ ಮುಂತಾದ ಹಿರಿ-ಕಿರಿಯ ಕಲಾವಿದರಿಂದ 'ಭೀಮೂಸ್...' ತುಂಬಿದೆ.

(ದಟ್ಸ್‌ಕನ್ನಡ ಸಿನಿ ವಾರ್ತೆ)

Please Wait while comments are loading...