ಹೊಸ ಮತ್ತು ಹಳೆ ತಲೆಮಾರಿನ ಕೊಂಡಿ ಸಿನಿಗಂಧ

By Rajendra

Cinegandha Kannada cinema magazine
ಕನ್ನಡ ಸಿನಿಮಾ ಪತ್ರಿಕೆಗಳು ಸಾಕಷ್ಟು ಬಂದಿವೆ. ಹೆಚ್ಚಿನವು ಗ್ಲಾಮರ್ ಓರಿಯೆಂಟೆಡ್ ಮತ್ತು ಸಿನಿಮಾ ಸುದ್ದಿಗೆ ಸಂಬಂಧಿಸಿದ ಪತ್ರಿಕೆಗಳು.ಇವೆಲ್ಲದರ ಮಧ್ಯೆ ಹೊರಬಂದಿರುವ ಹೊಸ ಪತ್ರಿಕೆ ಸಿನಿಗಂಧ. ಹೊಸ ಮತ್ತು ಹಳೆ ತಲೆಮಾರಿನ ಕೊಂಡಿಯಂತೆ ಕನ್ನಡ ಸಿನಿಮಾ ಜಗತ್ತಿನೆಡೆಗೊಂದು ಬೆರಗು ನೋಟ ಬೀರುತ್ತಿದೆ.

ಸಿನಿಮಾ ಇತಿಹಾಸ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಕಾಲಂಗಳ ಮೂಲಕ ಹೇಳಹೊರಟಿರುವ ಸಿನಿಗಂಧ,ಓದುಗ ಪ್ರಿಯರನ್ನು ಅತೀ ಕಡಿಮೆ ಅವಧಿಯಲ್ಲೇ ಆಕರ್ಷಿಸಿದೆ.ಜೊತೆಗೆ ಅತ್ಯಾಕರ್ಷಕ ಕಾರ್ಟೂನ್ ಗಳು, ಕಾಮಿಕ್ಸ್ ಗಳು, ಚಿಕ್ಕಮಕ್ಕಳಿಂದ ಹಿಡಿದು, ವೃದ್ಧರನ್ನೂ ಸೆಳೆದಿದೆ!

ನಟಿ ಸರೀತಾ ಜೀವನ ಕಥನ, ವಿಷ್ಣು ದ್ವಾರಕೀಶ್ ಕದನ ಕಥನ,ತೊಗಲುಗೊಂಬೆಯ ಆಟದ ಮೂಲಕ ಚಿತ್ರವಿಮರ್ಶೆ ಹೇಳುವ ಕಾಲಂ.. ಹೀಗೆ ಪ್ರತಿಯೊಂದೂ ವಿ-ಭಿನ್ನ, ವಿ-ನೋದ, ವಿ-ಚಿತ್ರ. ಮೂರನೇ ಸಂಚಿಕೆ ಇನ್ನೇನು ಮಾರುಕಟ್ಟೆಗೆ ಬರಲಿದೆ. ರಾಕ್ ಲೈನ್ ವೆಂಕಟೇಶ್, ಯೋಗರಾಜ್ ಭಟ್, ಎಚ್ ಎಂ ರಾಮಚಂದ್ರ, ಸುಮನಾ ಕಿತ್ತೂರು, ಬಿ ಸುರೇಶ್, ಕೋಮಲ್, ದೀಪಕ್ ಸಾಗರ ಮತ್ತಿತ್ತರ ಮಿತ್ರರು ಸಂಪಾದಕೀಯ ಸಲಹಾ ಮಂಡಳಿಯಲ್ಲಿದ್ದಾರೆ.

ಶಂಕರನಾಗ್ ಜೀವದ ಗೆಳೆಯ ಮತ್ತು ಹತ್ತಿರದ ಒಡನಾಡಿ ಮನದೀಪ್ ರೈ ಅವರ ಎಕ್ಸ್ ಕ್ಲೂಸೀವ್ ಸಂದರ್ಶನ ಮೂಡಿಬರಲಿದೆ! ಜೊತೆಗೆ 25 ಆಟೋ ಡ್ರೈವರ್ ಗಳು ಶಂಕರಣ್ಣನ ಬಗ್ಗೆ ತಮಗೆ ಗೊತ್ತಿರುವ ವಿಶೇಷ ಮಾಹಿತಿ ನೀಡಲಿದ್ದಾರೆ! ನಿರೀಕ್ಷಿಸಿ. ಸಿನಿಗಂಧ ಪತ್ರಿಯ ವೆಬ್‌ಸೈಟ್‌ಗೆ ದಾರಿ ಇಲ್ಲಿದೆ.

ವೈಚಾರಿಕ ಹಿನ್ನೆಲೆಯ ವಿಷಯಗಳನ್ನು ಪಂಚಿಂಗ್ ಮತ್ತು ಸರಳ ಭಾಷೆಯಲ್ಲಿ ಬರೆದು, ಹೊಚ್ಚ ಹೊಸ ಕಾಲಂಗಳಿಗೆ ಒಂದು ಮ್ಯಾಗಜಿನ್ ಕೊಟ್ಟ ಪತ್ರಕರ್ತ ವಿನಾಯಕರಾಮ್ ಈ ಸಿನಿಗಂಧ ಪತ್ರಿಕೆಯ ಸಂಪಾದಕ. ವಿಭಿನ್ನ ವಿನೋದ ವಿಚಿತ್ರ ಎಂಬುದು ಪತ್ರಿಕೆಯ ಧ್ಯೇಯವಾಕ್ಯ. ಪ್ರತಿ ಸಂಚಿಕೆಯೂ ವಿಭಿನ್ನ, ವಿಚಿತ್ರ, ವಿನೋದ.

ವಿಜಯಕರ್ನಾಟಕದಲ್ಲಿ ಒಂದಷ್ಟು ವರ್ಷ ಇದ್ದು, ಸಿನಿಮಾ ಬರವಣಿಗೆಗೆ ವಿ-ಚಿತ್ರ ರೂಪ ಕೊಟ್ಟು ಅದರಿಂದ ಓದುಗ ಬಳಸಿಕೊಂಡ ಅವರ ಅದೆಷ್ಟೋ ಚಿತ್ರ ವಿಮರ್ಶೆಗಳು ಚಿತ್ರ ವಿಮರ್ಶೆಗಳು ದಟ್ಸ್ ಕನ್ನಡದಲ್ಲೂ ಪ್ರಕಟವಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕಾಲಂ ಬರೆಯುತ್ತಿರುವ ಅವರು, ಸಿನಿ ಸುದ್ದಿಗಳನ್ನೂ ಸಂಪಾದಿಸುವ ಕೆಲಸ ಮಾಡುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Cinegandha is a weekly cinema magazine is purely meant for Kannada movies. The magazine gives details about Kannada movie starts and churning out fantastic movie content in myriad cool, fun, authentic way. Vinayakaram Kalagaru is the Managing Editor of the magazine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X