ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ದರ್ಶನ್ 'ಚಿಂಗಾರಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ಬಹುನಿರೀಕ್ಷಿತ 'ಚಿಂಗಾರಿ' ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ತಿಂಗಳು 26ಕ್ಕೆ ಬಿಡುಗಡೆ ಆಗಬೇಕಾಗಿದ್ದ ಅದು ಮುಂದಿನ ತಿಂಗಳು 3ಕ್ಕೆ (ಫೆಬ್ರವರಿ 3, 2012) ಬಿಡುಗಡೆಯಾಗಲಿದೆ. ಈ ಮೊದಲು ಆಡಿಯೋ ಬಿಡುಗಡೆ ವೇಳೆಯಲ್ಲಿ ಕೂಡ ಇದೇ 26ಕ್ಕೆ ಬಿಡುಗಡೆ ಆಗುವುದೆಂದು ಹೇಳಲಾಗಿತ್ತು.
ಕಳೆದ ವರ್ಷ ಬಿಡುಗಡೆಯಾಗಿದ್ದ ದರ್ಶನ್ ನಾಯಕತ್ವದ 'ಸಾರಥಿ' ಯಶಸ್ವಿಯಾಗಿ 100 ದಿನ ಪೂರೈಸಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಸಾರಥಿ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಚಿತ್ರತಂಡ ಅದ್ದೂರಿಯಾಗಿ ಆಚರಿಸಿಕೊಂಡಿದೆ. ಸಾರಥಿ ನಂತರ ದರ್ಶನ್ ಚಿತ್ರಕ್ಕೆ ಬಹಳಷ್ಟು ನಿರೀಕ್ಷೆ ಮೂಡುವಂತಾಗಿದೆ.
ಈ ತಿಂಗಳು 26ಕ್ಕೆ 'ಗಣರಾಜ್ಯೋತ್ಸವ' ದಿನದಂದು ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವದ 'ಆರಕ್ಷಕ' ಚಿತ್ರ ತೆರೆಗೆ ಬರಲಿದೆ. ಮರುದಿನ ಬಿಡುಗಡೆಗೆ ಕಾದಿದ್ದ ಚಿಂಗಾರಿ ಮುಂದಕ್ಕೆ ಹೋಗಿರುವುದರಿಂದ ಆರಕ್ಷಕ ಚಿತ್ರಕ್ಕೆ ಮತ್ತೊಂದು ಬಿಗ್ ಬಜೆಟ್ ಕನ್ನಡ ಚಿತ್ರದ ಸ್ಪರ್ಧೆ ತಪ್ಪಿದಂತಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Darshan Movie Chingari Release postponed to Feb 3 2012, Before this, team announced it on 26th Jan, 2012. Chingari is directed by Geleya movie fame Choreographer A Harsha.


Click it and Unblock the Notifications











