ತಾಜಾ ಕತೆಯೊಂದಿಗೆ ಮರಳಿದ ಜೇಕಬ್ ವರ್ಗೀಸ್

By Rajendra

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ ಜೇಕಬ್ ವರ್ಗೀಸ್ ಸ್ವಲ್ಪ ಗ್ಯಾಪ್‌ನ ಬಳಿಕ ಮತ್ತೊಂದು ತಾಜಾ ಚಿತ್ರಕತೆಯೊಂದಿಗೆ ಮರಳಿದ್ದಾರೆ. ಈ ಬಾರಿ ಅವರು ಪ್ರೀತಿ ಪ್ರೇಮದ ಕಥನಕ್ಕೆ ಶರಣೆಂದಿದ್ದಾರೆ. ಈ ಹಿಂದೆ ಅವರ ನಿರ್ದೇಶನದಲ್ಲಿ ಬಂದಂತಹ 'ಸವಾರಿ' (ರೀಮೇಕ್) ಹಾಗೂ 'ಪೃಥ್ವಿ' (ಸ್ವಮೇಕ್) ಚಿತ್ರಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದವು.

ಬಳ್ಳಾರಿ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಐಎಎಸ್ ಅಧಿಕಾರಿಯಾಗಿ ಖಡಕ್ ಅಭಿನಯ ನೀಡಿದ್ದರು. ಈ ಬಾರಿಯೂ ಪುನೀತ್ ಅವರನ್ನೆ ತಮ್ಮ ಚಿತ್ರಕ್ಕೆ ನಾಯಕ ನಟ ಅಂದುಕೊಂಡಿದ್ದರಂತೆ. ಆದರೆ ಪುನೀತ್ ಡೇಟ್ಸ್ ಸಿಗದೆ ಈಗವರು ಹೊಸಬರಿಗೆ ಬಲೆ ಬೀಸಿದ್ದಾರೆ.

ಇದಕ್ಕಾಗಿ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಡಿಷನ್ ಕೂಡ ನಡೆಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆಯನ್ನು ಪರಿಚಯಿಸುವ ಸನ್ನಾಹದಲ್ಲಿದ್ದಾರೆ ಜೇಕಬ್. ಇದೇ ಚಿತ್ರವನ್ನು ತೆಲುಗಿನಲ್ಲಿ ಮಾಡುವ ಉದ್ದೇಶ ಜೇಕಬ್ ಅವರಿಗಿದೆ. ಚಿತ್ರದ ಸಂಪೂರ್ಣ ವಿವರಗಳು ಇನ್ನಷ್ಟೆ ಹೊರಬೀಳಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Director Jacob Varghese back to Kannada films. Earlier he has directed Savari and Prithvi (Puneet Rajkumar lead) movie in Kannada.This time it will be a love story and entertainer he says. He is searching for new faces for his upcoming untitled movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X