ಶೀಘ್ರದಲ್ಲೆ ಬಣ್ಣದ ಲೋಕಕ್ಕೆ ಡಾ.ರಾಜ್ ಮೊಮ್ಮಗ!
ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ‍್ಕುಮಾರ್ ಶೀಘ್ರದಲ್ಲೆ ಬಣ್ಣದ ಲೋಕಕ್ಕೆ ಅಡಿಯಿಡಲಿದ್ದಾರೆ. ಈ ಬಗ್ಗೆ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಹುಬ್ಬಳ್ಳಿಯಲ್ಲಿಂದು ಸ್ಪಷ್ಟಪಡಿಸಿದರು.
'ಮೈಲಾರಿ' ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಆಚರಿಸಲು ಶಿವಣ್ಣ ಇಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಶಿವಣ್ಣ, ಶೀಘ್ರದಲ್ಲೆ ವಿನಯ್ ರಾಜ್‌ರನ್ನು ಬಣ್ಣದ ಲೋಕಕ್ಕೆ ಪರಿಚಯಿಸುವುದಾಗಿ ತಿಳಿಸಿದರು. ಅಭಿಮಾನಿಗಳ ಪ್ರೋತ್ಸಾಹ, ಬೆಂಬಲ ಹೀಗೇ ಇದ್ದರೆ ತಾವೂ ಇನ್ನೂ 25 ವರ್ಷ ಅಭಿನಯಿಸುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
2012ಕ್ಕೆ ತಮ್ಮ ಮಗನನ್ನ್ನು ಬೆಳ್ಳಿ ಪರದೆಗೆ ಪರಿಚಯಿಸುತ್ತಿರುವುದಾಗಿ ರಾಘವೇಂದ್ರ ರಾಜ್ ಕುಮಾರ್ ಈ ಹಿಂದೆ ಹೇಳಿದ್ದರು. "ಅದೇ ವರ್ಷ ಪ್ರಳಯ ಆಗುತ್ತದೆಂಬ ಎಂದು ಜನ ಮಾತಾನಾಡಿಕೊಳ್ಳುತ್ತಿದ್ದಾರೆ. ಆಗಲೇ ಮಗನ ವೃತ್ತಿ ಜೀವನಕ್ಕೆ ನಾಂದಿ ಹಾಡುವ ಬಯಕೆ ನನ್ನದಾಗಿದೆ. ಏನಾಗುತ್ತದೋ ನೋಡೋಣ" ಎಂದು ರಾಘಣ್ಣ ಮಾರ್ಮಿಕವಾಗಿ ನುಡಿದಿದ್ದರು.
ಅಭಿನಯಕ್ಕೆ ಅಡಿಯಿಡುತ್ತಿರುವ ವಿನಯ್ ರಾಜ್ ಅವರೇನು ಕೈಕಟ್ಟಿ ಕುಳಿತಿಲ್ಲ. ಫೈಟಿಂಗ್, ಡ್ಯಾನ್ಸಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ. ನಾಯಕ ನಟನಿಗೆ ಬೇಕಾದ ಮೈಕಟ್ಟು ಅವರಿಗಿದೆ. ಡಾ.ರಾಜ್ ಅಭಿಮಾನಿಗಳಿಗಳಿಗೂ ವಿನಯ್ ಎಂಟ್ರಿ ಬಗ್ಗೆ ಕುತೂಹಲ ಇದ್ದೇ ಇದೆ. ಮೇಲಿಂದ ತಾತ ಮತ್ತುರಾಜ್‌ರ ಆಶೀರ್ವಾದ ಧಾರಾಳವಾಗಿದೆ.


Click it and Unblock the Notifications











