ಸಲ್ಮಾನ್ ಕೇಳ್ದ, ದೀಪಿ ಸ್ಕರ್ಟ್ ಕಳಚಿ ಕೊಟ್ಟಳು

By Mahesh

ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ಗೆಳೆತನ ಎಂದರೆ ಎಂಥಾ ಹುಡುಗಿಯಾದರೂ ಎದೆಗಾರಿಕೆ ಬೇಕು. ಆದರೆ, ಒಂದು ವಿಷಯಕ್ಕೆ ಮಾತ್ರ ಸಲ್ಮಾನ್ ಕೇಳಿದ್ರೆ ಯಾರೂ ಇಲ್ಲ ಅನ್ನೋಲ್ಲ. ಸಲ್ಮಾನ್ ನ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಮುಕ್ತವಾಗಿ ಕೈ ಜೋಡಿಸುತ್ತಾರೆ. ಇದೇ ರೀತಿ ನಮ್ಮ ಬೆಂಗಳೂರು ಬೆಡಗಿ ದೀಪಿಕಾ ಕೂಡಾ ಸಲ್ಮಾನ್ ಗೆ ಸಹಾಯ ಮಾಡಿದ್ದಾಳೆ. ಇಷ್ಟಕ್ಕೂ ದೀಪಿ ಸ್ಕರ್ಟ್ ಸಲ್ಮಾನ್ ಗೂ ಏನು ಸಂಬಂಧ.

ನಿಮ್ಮ ಸ್ಕರ್ಟ್ ಕೊಡ್ತೀರಾ ಎಂದಿದ್ದಕ್ಕೆ ಹಿಂದು ಮುಂದು ಯೋಚಿಸದೆ ಕಳಚಿ ಕೊಟ್ಟಿದ್ದಾಳೆ. ದಮ್ ಮಾರೋ ದಮ್ ಚಿತ್ರದ ಐಟಂ ಸಾಂಗ್ಸ್ ನಲ್ಲಿ ದೀಪಿ ಹಾಕಿದ್ದ ಸ್ಕರ್ಟ್ ಈಗ ಆನ್ ಲೈನ್ ನಲ್ಲಿ ಹರಾಜಾಗುತ್ತಿದೆ. ಸಲ್ಮಾನ್ ಖಾನ್ ನಡೆಸುವ ಎನ್ ಜಿಒ "ಬಿಯಿಂಗ್ ಹ್ಯೂಮನ್" ಗಾಗಿ ಈ ಹರಾಜು ನಡೆಯುತ್ತಿದ್ದು, ಅದರಿಂದ ಬಂದ ಹಣವನ್ನು ನಿರ್ಗತಿಕರಿಗೆ ನೀಡಲಾಗುವುದು ಎಂದು ನಿರ್ದೇಶಕ ರೋಷನ್ ಸಿಪ್ಪಿ ಹೇಳಿದ್ದಾರೆ.

ವಿವಾದಿತ ಚಿತ್ರಕ್ಕೆ ಕೋರ್ಟ್ ಅನುಮತಿ ಕೂಡಾ ಸಿಕ್ಕಿರುವುದು ತಂಡಕ್ಕೆ ಖುಷಿ ಕೊಟ್ಟಿದೆ. ಆಸಕ್ತರು ಚಿತ್ರದ ಅಧಿಕೃತ ವೆಬ್ ತಾಣದಲ್ಲಿ ದೀಪಿ ಹಾಕಿದ್ದ ಸ್ಕರ್ಟ್ ನೋಡಬಹುದು. ಹರಾಜಿಗೆ ಬಿಡ್ ಸಲ್ಲಿಸಬಹುದು.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಕಂಡ ಅತ್ಯಂತ ಸೆಕ್ಸಿ ಹಾಗೂ ಉಲ್ಲಾಸದಾಯಕ ಹಾಡಿಗೆ ಕುಣಿದ ತೃಪ್ತಿಯಿದೆ. ದಮ್ ಮಾರೋ ದಮ್ ಚಿತ್ರದಲ್ಲಿ ತಾವು ಹಾಕಿದ್ದ ವಸ್ತ್ರ ಹರಾಜಾಗುತ್ತಿರುವುದಕ್ಕೆ ಸಂತಸವಿದೆ ಎಂದು ದೀಪಿಕಾ ಹೇಳಿದ್ದಾರೆ. ಸ್ಕರ್ಟ್ ಧರಿಸಿ ಮೈಮರೆತು ಕುಣಿದಿದ್ದು ಎಷ್ಟೊ ಜನರ ನಿದ್ದೆಕೆಡಸಿದೆ ನಿಜ. ಹಲವಾರು ಅಭಿಮಾನಿಗಳು ಉಡುಗೊರೆಗಳನ್ನು ಕಳಿಸುತ್ತಾ ಇದ್ದಾರೆ ಎಂದಿದ್ದಾರೆ.

ಈ ಮಿನಿ ಸ್ಕರ್ಟ್ ನ ವಿನ್ಯಾಸಗಾರ್ತಿ ಅನಾಹಿತ ಶ್ರಾಫ್ ಆಡ್ಜಾನಿಯಾ. ಅನಾಹಿತ ಹೇಳುವ ಪ್ರಕಾರ, ದೀಪಿಕಾರ ಮೈಮಾಟಕ್ಕೆ ಒಪ್ಪುವ ಸ್ಕರ್ಟ್ ಡಿಸೈನ್ ಮಾಡಬೇಕಿತ್ತು. ರೇವ್ ಪಾರ್ಟಿಯಲ್ಲಿ ಮೈಮರೆತು ಕುಣಿದಾಡುವ ಹುಡುಗಿ ಧರಿಸುವ ಸ್ಕರ್ಟ್ ಬೇಕಿತ್ತು. ಅದರಂತೆ ವಿನ್ಯಾಸಗೊಳಿಸಲಾಗಿದೆ. ಫೈಬರ್ ಯುಕ್ತ ಲೈಕ್ರಾ ಬ್ಲೌಸ್ ಜೊತೆಗೆ ಸ್ಕರ್ಟ್ ನಲ್ಲಿ ಮೆಟಲ್ ಶೀಟ್ ತುಣುಕುಗಳನ್ನು ಜೋಡಿಸಲಾಗಿದೆ. ಚರ್ಮದ ಬ್ಯಾಂಡ್ ಜೊತೆಗೆ ಶಿಫಾನ್ ಫ್ಯಾಬ್ರಿಕ್ ಹೊದಿಕೆಯಿದೆ ಎಂದಿದ್ದಾರೆ.

More from Filmibeat

English summary
Director Rohan Sippy has decided to auction the skimpy outfit that Deepika wear in Dum Maro Dum Item Song. The auctioned money will go to Being Human NGO run by Salman Khan. Deepika is happy about the song and the charity work.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X