»   » ಎಲ್ಲರನ್ನೂ ಆಕರ್ಷಿಸುತ್ತಿರುವ ಕಾಮಣ್ಣನ ಮಕ್ಕಳು

ಎಲ್ಲರನ್ನೂ ಆಕರ್ಷಿಸುತ್ತಿರುವ ಕಾಮಣ್ಣನ ಮಕ್ಕಳು

Subscribe to Filmibeat Kannada

ಶುಕ್ರವಾರ (ಜೂ.20) ಬಿಡುಗಡೆಯಾದ 'ಕಾಮಣ್ಣನ ಮಕ್ಕಳು' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಸಂತೋಷ್, ವೀರೇಶ್, ಮೋಹನ್, ನವರಂಗ್, ಉಲ್ಲಾಸ್ ಹಾಗೂ ಇತರ ಚಿತ್ರಮಂದಿರಗಳು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕಾಮೆಡಿ, ಆಕ್ಷನ್, ಸೆಂಟಿಮೆಂಟ್ ಮಸಾಲೆಗಳನ್ನು ಹೊಂದಿರುವ ಈ ಚಿತ್ರದಲ್ಲಿ ಸುದೀಪ್ ಹಾಗೂ ರಾಕ್‌ಲೈನ್ ವೆಂಕಟೇಶ್ ಜೋಡಿ ಮೋಡಿ ಮಾಡುತ್ತಿದೆ.

ಚಿ.ಗುರುದತ್ ನಿರ್ದೇಶನದಲ್ಲಿ ಹೊರಬರುತ್ತಿರುವ ಎರಡನೆಯ ಚಿತ್ರವಿದು. ಈ ಹಿಂದೆ ದರ್ಶನ್ ಹಾಗೂ ರಮ್ಯಾ ಅಭಿನಯದ 'ದತ್ತ' ಚಿತ್ರವನ್ನು ಗುರುದತ್ ನಿರ್ದೇಶಿಸಿದ್ದರು. ಈಗ ಕಾಮಣ್ಣನ ಮಕ್ಕಳು ತೆರೆಕಂಡು ಚಿತ್ರರಸಿಕರನ್ನು ಬರಸೆಳೆಯುತ್ತಿದೆ. ಕಾಮಣ್ಣನ ಪಾತ್ರದಲ್ಲಿ ದೊಡ್ಡನ ಪಾತ್ರನ ಅದ್ಭುತ ಎನ್ನುತ್ತಿದ್ದಾರೆ ಪ್ರೇಕ್ಷಕರು. ಬಹಳ ದಿನಗಳ ಗ್ಯಾಪ್‌ನ ನಂತರ ನಿರ್ಮಾಪಕ ರಾಕ್‌ಲೈನ್ ನಟಿಸಿರುವ ಚಿತ್ರದ ಪ್ರಮುಖ ಪಾತ್ರವನ್ನು ಪ್ರೇಕ್ಷಕ ಮೆಚ್ಚಿದ್ದಾನೆ.

ಇನ್ನು ಚಿತ್ರದ ವಿಶೇಷಗಳೆಂದರೆ, ಎನ್.ಎಸ್.ರಾಜ್‌ಕುಮಾರ್ ಮತ್ತು ಚಿ.ಗುರುದತ್ ನಿರ್ಮಿಸಿರುವ ಈ ಚಿತ್ರಕ್ಕೆ ವಿದ್ಯಾಸಾಗರ್ ಸಂಗೀತ, ಶ್ರೀವೆಂಕಟ್ ಛಾಯಾಗ್ರಹಣ, ರಂಗನಾಥ್ ಸಂಭಾಷಣೆ ಇದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಾಧು ಕೋಕಿಲ, ರಮೇಶ್ ಭಟ್, ದೀಪು, ವೈಭವಿ ಮುಂತಾದವರಿದ್ದಾರೆ. ನಟಿ ಪೂಜಾಗಾಂಧಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

(ದಟ್ಸ್‌‍ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada