250 ಚಿತ್ರಮಂದಿರಗಳಲ್ಲಿ ಲಗ್ಗೆ ಇಡಲಿದ್ದಾನೆ 'ಜೋಗಯ್ಯ'

By Mahesh

ನಿರ್ದೇಶಕ ಪ್ರೇಮ್ ಹೈಪ್ ಕ್ರಿಯೇಟ್ ಮಾಡೋದರಲ್ಲಿ ನಿಸ್ಸೀಮ. ಆಗಸ್ಟ್ 12ಕ್ಕೆ ಬಿಡುಗಡೆಗೆ ನಿಗದಿಯಾಗಿರುವ ವರ್ಷದ ಬಹುನಿರೀಕ್ಷಿತ ಜೋಗಯ್ಯ ಚಿತ್ರವನ್ನು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮ್ ಘೋಷಿಸಿದ್ದಾರೆ. ಅಲ್ಲದೆ ಬೆಂಗಳೂರು ಕೆಂಪೇಗೌಡ ರಸ್ತೆಯೊಂದರಲ್ಲೇ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆದಿದೆ.

ಚಿತ್ರದ ಪ್ರಚಾರಕ್ಕಾಗಿ ಕ್ಯಾಪ್, ಟಿ-ಷರ್ಟ್ ಮತ್ತು 3ಡಿ ಫೋಟೋ ಕಾರ್ಡನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಶಾರೂಖ್ ಅಭಿನಯದ ದೀಪಾವಳಿ ಹಬ್ಬದ ಹೊತ್ತಿಗೆ ಬಿಡುಗಡೆಯಾಗುವ ರಾ-ಒನ್ ಚಿತ್ರಕ್ಕೆ ಮಾತ್ರ ಈವರೆಗೆ ಫೋಟೋ ಕಾರ್ಡ್ ಬಳಸಿ ಪ್ರಚಾರ ನಡೆಸಲಾಗುತ್ತಿತ್ತು. ಜೋಗಯ್ಯ ಚಿತ್ರದ ಆಡಿಯೋ ಈಗಾಗಲೇ ದಾಖಲೆ ಮಾರಾಟ ಕಂಡಿದೆ. ಪ್ರೇಮ್ ನಿರ್ದೇಶನದ ಪುನೀತ್ ಮುಖ್ಯ ಭೂಮಿಕೆಯಲ್ಲಿದ್ದ ರಾಜ್ ದಿ ಶೋ ಮ್ಯಾನ್ ಚಿತ್ರ 150 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.

ರಾಜ್ಯಾದ್ಯಂತ ಚಿತ್ರಕ್ಕೆ ಭಾರೀ ಬೇಡಿಕೆ ಇದ್ದು, ಚಿತ್ರಮಂದಿರಗಳ ಬಳಿ ನೂಕು ನುಗ್ಗಲು ತಪ್ಪಿಸಲು ಹತ್ತು ದಿನಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ನೀಡಲು ನಿರ್ಮಾಪಕಿ ರಕ್ಷಿತಾ ಪ್ರೇಮ್ ನಿರ್ಧರಿಸಿದ್ದಾರೆ. ಅಲ್ಲದೆ ಪಕ್ಕದ ತಮಿಳುನಾಡು, ಆಂಧ್ರ, ಕೇರಳ, ಮುಂಬೈನಲ್ಲೂ ಏಕಕಾಲದಲ್ಲಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರವನ್ನು ಅಮೇರಿಕ ಹಾಗೂ ಇತರ ದೇಶಗಳಲ್ಲಿ ಕೂಡಾ ಬಿಡುಗಡೆ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ. ಕಳೆದ ಬಾರಿ ರಾಜ್ ಚಿತ್ರವನ್ನು ಕೂಡಾ ಅಮೇರಿಕಾ, ಆಸ್ಟೇಲಿಯಾ ಮತ್ತು ಗಲ್ಫ್ ದೇಶದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದು ಹುಸಿಯಾಗಿತ್ತು. ಜೋಗಯ್ಯ ಚಿತ್ರಕ್ಕೆ ಹರಿಕೃಷ್ಣ ಸಂಗೀತ, ನರೇಂದ್ರ ಬಾಬು ಸಂಭಾಷಣೆ ಮತ್ತು ನಂದ ಛಾಯಾಗ್ರಹಣ ನೀಡಿದ್ದಾರೆ.

More from Filmibeat

English summary
Director Prem better known for his gimmick and publicity stunt. Now announced Century Star Shivaraj kumar starrer Jogayya movie to be released in 250 theaters across Karnataka. Rakshitha Prem, Producer is concentrating on advance booking, online booking, overseas release dates. Much awaited movie is likely to hit the screen on Aug.12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X