»   »  ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'

ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'

Subscribe to Filmibeat Kannada
Jogi sequel in Prem, Shivrajkumar combination
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದಲ್ಲಿ 'ಜೋಗಿ ಭಾಗ 2' ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಪ್ರೇಮ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಜೆನ್ನಿಫರ್ ಕೊತ್ವಾಲ್ ಸೇರಿದಂತೆ ಜೋಗಿ ಚಿತ್ರದಲ್ಲಿ ನಟಿಸಿದ್ದ ಬಹುತೇಕ ತಾರಾಗಣ 'ಜೋಗಿ ಭಾಗ 2' ರಲ್ಲೂ ಇರುತ್ತದೆ. ಆದರೆ ನಿರ್ಮಾಪರು ಮಾತ್ರ ಬದಲಾಗಿದ್ದಾರೆ. ಪ್ರೇಮ್ ಪತ್ನಿ ಮತ್ತು ನಟಿ ರಕ್ಷಿತಾ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಬದಲಾಗುತ್ತಿದ್ದಾರೆ!

ಈ ಬಗ್ಗೆ ನಟಿ ರಕ್ಷಿತಾ ಮಾತನಾಡುತ್ತಾ, ಜೋಗಿ ಭಾಗ 2 ಚಿತ್ರದ ನಿರ್ಮಾಣ ನನ್ನ ಜೀವನದಲ್ಲಿ ಅತಿ ದೊಡ್ಡ ಹೆಜ್ಜೆ. ನಾನು ನಿಜಕ್ಕೂ ಆತಂಕ,ಸಂಭ್ರಮಗಳನ್ನು ಏಕಕಾಲಕ್ಕೆ ಅನುಭವಿಸುವಂತಾಗಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ. 'ರಾಜ್ ದ ಶೋ ಮ್ಯಾನ್' ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಜೋಗಿ ಭಾಗ 2 ನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು. ಜೋಗಿ ಭಾಗ 2 ಚಿತ್ರ ಶಿವರಾಜ್ ಕುಮಾರ್ ಅವರನ್ನೂ ಗೆಲುವಾಗಿಸಿದೆ.

''ನನ್ನ ವೃತ್ತಿ ಜೀವನದಲ್ಲಿ 2008ನೇ ವರ್ಷ ಸಾಕಷ್ಟು ಕಹಿ ಕೊಟ್ಟಂತಹ ವರ್ಷ. ಒಂದೇ ತರಹದ ಚಿತ್ರಗಳನ್ನು ನೋಡಿದ ಪ್ರೇಕ್ಷಕರು ಬೇಸತ್ತಿದ್ದಾರೆ. ಹಾಗಾಗಿ ನನ್ನ ಕೇಶವಿನ್ಯಾಸವನ್ನು ಬದಲಾಯಿಸಿಕೊಂಡೆ.ಆದರೂ ಬಾಕ್ಸಾಫೀಸ್ ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ನನ್ನ ಹೊಸ ಲುಕ್ ಪ್ರೇಕ್ಷಕರಿಗೂ ಹಿಡಿಸಲಿಲ್ಲ. ನನ್ನ ಹಿಂದಿನ ಲುಕ್ಕನ್ನೇ ಪ್ರೇಕ್ಷರು ಇಷ್ಟಪಡುತ್ತಿದ್ದಾರೆ ಹಾಗಾಗಿ 'ಜೋಗಿ ಭಾಗ 2'ರಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ '' ಎನ್ನುತ್ತಾರೆ ಶಿವರಾಜ್ ಕುಮಾರ್.

'ಜೋಗಿ'ಯನ್ನು ಹೊರತುಪಡಿಸಿದರೆ ಶಿವಣ್ಣನ ಕೈಯಲ್ಲಿ ಈ ವರ್ಷ ಉತ್ತಮ ಕಥಾಹಂದರದ ಚಿತ್ರಗಳಿವೆ. ''ಹೆಚ್ಚಾಗಿ ಕೌಟುಂಬಿಕ ಕಥಾ ಚಿತ್ರಗಳಿಗೆ ಕಟ್ಟುಬಿದ್ದವನು ನಾನು.ಇಡೀ ಕುಟುಂಬದ ಜತೆ ಕೂತು ನನ್ನ ಚಿತ್ರಗಳನ್ನು ನೋಡಬಹುದು. ಆ ರೀತಿಯ ಚಿತ್ರಗಳಲ್ಲಿ ಭಾಗ್ಯದ ಬಳೆಗಾರ ಸಹ ಒಂದು. ಬಳೆಗಾರನ ಸಾಂಪ್ರಾದಾಯಿಕ ವೃತ್ತಿಯೇ ಚಿತ್ರದ ಕೇಂದ್ರ ಬಿಂದು. ಈ ಪುರಾತನ ವೃತ್ತಿಯ ಹಿಂದಿರುವ ತರ್ಕವನ್ನು ಚಿತ್ರಕತೆ ಹೇಳುತ್ತದೆ. ಇಂದಿನ ಹೆಣ್ಣುಮಕ್ಕಳು ಬಳೆಯ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ'' ಎಂದರು ಶಿವರಾಜ್ ಕುಮಾರ್.

ಸಂಗೀತ, ಸಂಪ್ರದಾಯ, ಜಾನಪದ ನನ್ನ ಚಿತ್ರಗಳ ಜೀವಾಳ. ಈ ಎಲ್ಲ ಅಂಶಗಳು ಕೂಡಿದರೆ ಯಾವುದೇ ವ್ಯಾಪಾರಿ ಚಿತ್ರಕ್ಕೂ ನೈಜತೆ ಬರುತ್ತದೆ ಎನ್ನುತ್ತಾರೆ ಪ್ರೇಮ್. ಒಟ್ಟಿನಲ್ಲಿ ಶಿವರಾಜ್ ಕುಮಾರ್, ಪ್ರೇಮ್ ಕಾಂಬಿನೇಷನ್ ಚಿತ್ರ ಗಾಂಧಿನಗರದಲ್ಲಿ ಮತ್ತೆ ಹೊಸ ಉತ್ಸಾಹ ಮೂಡಿಸಿದೆ. ಹಿಂದಿನ ಎಲ್ಲ ದಾಖಲೆಗಳನ್ನು ಜೋಗಿ ಭಾಗ 2 ಮೀರಿಸುತ್ತದೆ ಎಂಬ ಮಾತುಗಳು ಸಿನಿಮಾ ವಲಯದಲ್ಲಿ ಕೇಳಿಬರುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬ್ಲ್ಯಾಕ್ ಮೇಲ್ ನಿರ್ಮಾಪಕರಿಂದ ಜೋಗಿ ಪ್ರೇಮ್ ಗೆ ಸಂಕಷ್ಟ!
ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ಬಿಜೆಪಿ ಪರ ಪ್ರಚಾರಕ್ಕೆ ನಟ ದರ್ಶನ್, ರಕ್ಷಿತಾ, ಶ್ರುತಿ
ರಕ್ಷಿತಾ, ರಮ್ಯ, ರಾಧಿಕಾ: ಯಾರು ನಂ.1?
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada