»   » 'ಜೋಶ್'ನೊಂದಿಗೆ ಹೊಸ ಸಾಹಸಕ್ಕಿಳಿದ ಎಸ್.ವಿ.ಬಾಬು

'ಜೋಶ್'ನೊಂದಿಗೆ ಹೊಸ ಸಾಹಸಕ್ಕಿಳಿದ ಎಸ್.ವಿ.ಬಾಬು

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಚಾಲ್ತಿಯಲ್ಲಿರುವ 'ನವಕೋಟಿ' ನಿರ್ಮಾಪಕರಲ್ಲಿ ಎಸ್.ವಿ.ಬಾಬು ಸಹ ಒಬ್ಬರು. ಕನ್ನಡದ ಹನಿಮೂನ್ ಎಕ್ಸ್‌ಪ್ರೆಸ್, ತೆನಾಲಿ ರಾಮ, ಸವಿಸವಿ ನೆನಪು ಸೇರಿದಂತೆ ತೆಲುಗಿನ 'ಅಂದಮೈನ ಮನಸುಲು' ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕ. ಈಗ ಎಂಟು ತಿಂಗಳ ದೀರ್ಘ ಹುಡುಕಾಟದ ನಂತರ ಹೊಸ ಮುಖಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ. ಎಂಟು ತಿಂಗಳ ಕಾಲಾವಧಿಯಲ್ಲಿ 12000 ಅರ್ಜಿಗಳನ್ನು ಪರಿಶೀಲಿಸಿ 40 ಮಂದಿಯ ಆಯ್ಕೆ ಪಟ್ಟಿ ತಯಾರಿಸಿದ್ದರು. ಆ 40 ಮಂದಿಯಲ್ಲಿ ಆರು ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅವರನ್ನು ಮಾಧ್ಯಮದವರಿಗೆ ಪರಿಚಯಿಸಿದರು.

ಆರು ಮಂದಿ ಜಾಲಿ ಹುಡುಗ್ರ ಹೆಸರು ರಾಕೇಶ್, ಅಮಿತ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಜಗನ್ನಾಥ್ ಅಂಥ. ಅವರನ್ನು ನಿರ್ದೇಶಕ ಶಿವಮಣಿ ತಮ್ಮದೆ ಅದ ಶೈಲಿಯಲ್ಲಿ ಮಾಧ್ಯಮದವರಿಗೆ ಪರಿಚಯಿಸಿದರು. ತಾರಾಗಣದಲ್ಲಿ ರೋಬೋ ಗಣೇಶ್, ಮಂಡ್ಯ ರಮೇಶ್, ಕರಿಬಸವಯ್ಯ, ಮನ್ದೀಪ್ ರೈ, ಶ್ರೀನಿವಾಸ ಪ್ರಭು, ತುಳಸಿ ಶಿವಮಣಿ, ಶುಭ ಬೆಳವಾಡಿ ಮುಂತಾದವರು ಇದ್ದಾರೆ. ಚಿತ್ರಕಥೆ ಶಿವಮಣಿ ಛಾಯಾಗ್ರಹಣ ಸಂತೋಷ್ ರೈ ಪತಾಜೆ ಅವರದು.

ಬಹಳಷ್ಟು ಮೂಲ ಕಥೆಗಾರರು ಬದಲಾದ ನಂತರ ಮುಂಚೆ ಈ ಚಿತ್ರಕ್ಕೆ 'ಜಾಲಿ ಹುಡುಗ್ರು' ಎಂದು ಹೆಸರಿಟ್ಟಿದ್ದರು. ಈಗ 'ಜೋಶ್' ಎಂದು ಹೆಸರು ಬದಲಾಯಿಸಿದ್ದಾರೆ. ಜೂ.20ರಂದು ಮುಹೂರ್ತ ಆಚರಿಸಿಕೊಳ್ಳುವ 'ಜೋಶ್ ' ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಕೇರಳದಲ್ಲಿ ನಡೆಯಲಿದೆ ಎಂದು ಶಿವಮಣಿ ತಿಳಿಸಿದರು. ಒಂದು ಕಾಲದ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ ಅವರ ಸಂಬಂಧಿ ವರ್ಧನ್ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಸಂಗೀತ ನೀಡಲಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್. ಸಾಹಿತ್ಯ ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯ ಶಿವ, ಆನಂದ್ ಅವರದು.

ತೆಲುಗಿನ ಚಿತ್ರಕಥೆ ಕನ್ನಡದ ಜಾಯಮಾನಕ್ಕೆ ಒಗ್ಗದ ಕಾರಣ ಶಿವಮಣಿ ಅವರ ಕಥೆಯನ್ನು ಆಯ್ಕೆ ಮಾಡಲಾಗಿದೆ. ನಾವು ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಕೆಲಸ ತೆಗೀತೀವಿ ಎಂದು ನಿರ್ಮಾಪಕ ಎಸ್.ವಿ.ಬಾಬು ತಮ್ಮ ಚಿತ್ರದ ಬಗ್ಗೆ ಆಶಾಭಾವ ವ್ಯಕ್ತಪಡಿಸಿದರು.

(ದಟ್ಸ್‌ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada